Advertisement
ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸಮಿತಿಗೆ ಸಂಚಾಲಕರಾಗಿ ನೇಮಿಸಿದೆ. ಆಯಾ ಸಮಿತಿಗಳಿಗೆ ವಹಿಸಿದ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ಕೊನೆಯ ಹಂತದ ಸಿದ್ಧತೆ ನಡೆದಿದೆ.
Related Articles
Advertisement
ಒಟ್ಟು 21 ಸಮಿತಿಗಳ ಕಾರ್ಯನಿರ್ವಹಣೆ: ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಸ್ವಾಗತ, ಹಣಕಾಸು, ಆಹಾರ, ಮೆರವಣಿಗೆ, ಸಾಂಸ್ಕೃತಿಕ, ವೇದಿಕೆ ಸಿದ್ಧತೆ, ನಗರ ಶೃಂಗಾರ ಮತ್ತು ಸ್ವತ್ಛತೆ, ಸ್ವಯಂ ಸೇವಕರ ನಿರ್ವಹಣೆ, ಪ್ರಚಾರ, ಸ್ತಬ್ಧಚಿತ್ರ, ಸಮ್ಮೇಳನ ಪ್ರಚಾರ ರಥ, ಸ್ಮರಣ ಸಂಚಿಕೆ, ಆಹ್ವಾನ ಪತ್ರಿಕೆ ವಿತರಣೆ, ವಸ್ತು ಪ್ರದರ್ಶನ, ಸಾಹಿತಿಗಳ ಭಾವಚಿತ್ರ ಸಿದ್ಧತೆ, ಆರೋಗ್ಯ, ಪುಸ್ತಕ ಮಳಿಗೆ, ಮಹಿಳಾ ಸಮಿತಿ, ಮೇಲುಸ್ತುವಾರಿ, ಸನ್ಮಾನ, ಸದಸ್ಯತ್ವ ನೋಂದಣಿ ಸೇರಿದಂತೆ ಒಟ್ಟು 21 ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಯಲ್ಲೂ ಸರ್ಕಾರಿ ಅಧಿಕಾರಿ, ಜನಪ್ರತಿನಿಧಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಚಾಲಕರುಗಳನ್ನು ನೇಮಿಸಲಾಗಿದೆ.
ಸಮ್ಮೇಳನಾಧ್ಯಕ್ಷ ವಸಂತರಾಜೇ ಅರಸ್: ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಹಲವು ಹೆಸರುಗಳು ಮುಂಚೂಣಿಯಲ್ಲಿದ್ದವು. ಆಯ್ಕೆ ಸಂಬಂಧವೇ ಹಲವು ಬಾರಿ ಸಭೆಗಳನ್ನು ನಡೆಸಲಾಗಿದ್ದು, ಅಂತಿಮವಾಗಿ ತಾಲೂಕಿನ ಬೆಟ್ಟದತುಂಗ ಗ್ರಾಮದ ಹಿರಿಯ ಶಿಕ್ಷಣ ತಜ್ಞ ಟಿ.ಸಿ. ವಸಂತರಾಜೇ ಅರಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕನ್ನಡ ಸಮ್ಮೇಳನದ ಮೂಲಕ ನಾಡು, ನುಡಿ, ಸಂಸ್ಕೃತಿ ಕುರಿತು ಎಲ್ಲರಿಗೂ ಅರಿವು ಮೂಡಸುವ ಕಾರ್ಯವನ್ನು ಕಸಾಪ ಮಾಡುತ್ತಿದೆ. ಜಿಲ್ಲ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದ್ದು, ತಾಲೂಕು ಸಮ್ಮೇಳನದ ಯಶಸ್ಸಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇನೆ.-ಕೆ.ಮಹದೇವ್, ಶಾಸಕ ಕಸಾಪದ ಇತಿಹಾಸದಲ್ಲಿ ಪಿರಿಯಾಪಟ್ಟಣ, ರಾಜ್ಯಕ್ಕೆ ಹತ್ತು ಹಲವು ಪ್ರಥಮಗಳನ್ನು ನೀಡಿದ ಹೆಗ್ಗಳಿಕೆಯಿದೆ. ತಾಲೂಕು ಕಸಾಪ ಘಟಕದಿಂದ 3ನೇ ಸಮ್ಮೇಳನವನ್ನು ಬೆಟ್ಟದಪುರದಲ್ಲಿ ಆಯೋಜಿಸಿದೆ. ಇಲ್ಲಿ ಸ್ಥಳೀಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
-ಡಾ.ವೈ.ಡಿ. ರಾಜಣ್ಣ, ಕಸಾಪ ಜಿಲ್ಲಾಧ್ಯಕ್ಷರು ಕೆ.ಮಹದೇವ್ ಮಾರ್ಗದರ್ಶನದಲ್ಲಿ ಕಳೆದ ವರ್ಷ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಈ ಬಾರಿಯೂ ತಾಲೂಕು ಸಮ್ಮೇಳನ ಯಶಸ್ವಿಯಾಗುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು.
-ಗೊರಳ್ಳಿ ಜಗದೀಶ್, ಕಸಾಪ ತಾಲೂಕು ಅಧ್ಯಕ್ಷರು * ಪಿ.ಎನ್. ದೇವೇಗೌಡ