Advertisement
ಒಂದು ಕಡೆ ಕ್ಷೇತ್ರಗಳ ಗಡಿ ನಿಗದಿಗೆ ಸೀಮಾ ನಿರ್ಣಯ ಆಯೋಗ ಇನ್ನೂ ಮೂರು ತಿಂಗಳು ಕಾಲಾವಕಾಶ ಕೇಳಿದೆ. ಇನ್ನೊಂದಡೆ ಕ್ಷೇತ್ರಗಳು ನಿಗದಿಯಾದ ಅನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರಕಾರ ಮೂರು ತಿಂಗಳು ಮಿತಿ ಹಾಕಿಕೊಂಡಿದೆ.
Related Articles
Advertisement
ಸೀಮಾ ನಿರ್ಣಯ ಆಯೋಗ ರಚನೆಯಾದ ಅನಂತರ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಆಯೋಗದ ರಚನೆಗಿಂತ ಮುನ್ನ 30 ಜಿಲ್ಲೆಗಳು 233 ತಾಲೂಕುಗಳು ಇದ್ದವು. ಅನಂತರ 31 ಜಿಲ್ಲೆ, 238 ತಾಲೂಕು ಆಗಿದೆ. ಈ ಮಧ್ಯೆ ಅನೇಕ ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿವೆ. ಹೀಗಾಗಿಇನ್ನಷ್ಟು ಸಮಯ ಬೇಕೆಂದು ಆಯೋಗ ಹೇಳಿದೆ. ಸೀಮಾ ನಿರ್ಣಯ ಆಯೋಗ ಹೇಳಿದ್ದು
– ಜಿಲ್ಲಾಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವನೆ ತರಿಸಿಕೊಳ್ಳಲು 30 ದಿನ ಕಾಲಾವಕಾಶ ಬೇಕು.
– ಪ್ರಸ್ತಾವನೆಗಳ ಪರಿಶೀಲನೆಗೆ 15 ದಿನ.
– ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಗಳಿಗೆ ಆಕ್ಷೇಪಣೆಗಳ ಆಹ್ವಾನ ಮತ್ತು ಅವುಗಳ ಪರಿಶೀಲನೆಗೆ 15 ದಿನ.
– ಕರಡು ಅಧಿಸೂಚನೆ ಮೇಲಿನ ಸಲಹೆ ಗಳನ್ನು ಅಂತಿಮಗೊಳಿಸಲು 15 ದಿನ.
– ಆಕ್ಷೇಪಣೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅದಾಲತ್‌ಗಳನ್ನು ನಡೆಸಲು 15 ದಿನ.
– ಅಂತಿಮ ವರದಿ ಸಲ್ಲಿಸಲು ಒಂದು ವಾರ ಬೇಕು. ಸರಕಾರ ಹೇಳಿದ್ದು
ತಾ.ಪಂ., ಜಿ.ಪಂ. ಕ್ಷೇತ್ರಗಳ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು 6 ತಿಂಗಳು ಕಾಲಾವಕಾಶ ಬೇಕು. ಈ ಕಾಲಾವಕಾಶ ಲಭಿಸದಿದ್ದರೆ ತಾಲೂಕು, ಜಿಲ್ಲೆಗಳ ಸಂಖ್ಯೆ ಹೆಚ್ಚಾದ್ದರಿಂದ ಕಾನೂನು ಬದಲಾವಣೆ ಮತ್ತು ಇನ್ನಿತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾ.ಪಂ., ಜಿ.ಪಂ. ಕ್ಷೇತ್ರಗಳನ್ನು ಮರು ವಿಂಗಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇಡೀ ಚುನಾವಣ ಪ್ರಕ್ರಿಯೆ ಅನೂರ್ಜಿತಗೊಳ್ಳುತ್ತದೆ. ಚುನಾವಣ ಆಯೋಗ ಹೇಳಿದ್ದು
ಕ್ಷೇತ್ರಗಳ ನಿಗದಿಯ ಅನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಾ.ಪಂ., ಜಿ.ಪಂ. ಚುನಾವಣೆಗೆ ಮತ ದಾರರ ಪಟ್ಟಿ ಪ್ರಕಟಿಸಲು ಕನಿಷ್ಠ ಒಂದು ತಿಂಗಳು ಬೇಕು. ಅನಂತರ ಚುನಾವಣ ಅಧಿಸೂಚನೆ, ಚುನಾ ವಣ ವೇಳಾ ಪಟ್ಟಿ ಪ್ರಕಟನೆಗೆ ಸಮಯ ಬೇಕಾಗುತ್ತದೆ. ಉಳಿದಂತೆ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. - ರಫೀಕ್ ಅಹ್ಮದ್