Advertisement

ಹದಗೆಟ್ಟ ತಾಲೂಕು ಆಡಳಿತ ವ್ಯವಸ್ಥೆ: ಆರೋಪ

01:52 PM Mar 08, 2021 | Team Udayavani |

ಕನಕಪುರ: ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರೈತರು ಕೆಲಸಕ್ಕೆ ಕಚೇರಿಗೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ನೂಲೂಕು ಅಧ್ಯಕ್ಷ ಶಶಿಕುಮಾರ್‌ ಆರೋಪಿಸಿದರು.

Advertisement

ನಗರದ ಕೋಟೆ ಗಣೇಶನ ದೇವಾಲಯದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿ ರಾಜು ನೇತೃತ್ವದಲ್ಲಿ ನಡೆದ ತಾಲೂಕು ರೈತ ಸಂಘದ ಪದಾಧಿಕಾರಿ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಲಂಚ ಕೊಡದೆಯಾವುದೇ ಕೆಲಸ ಮಾಡಿ ಕೊಡುವುದಿಲ್ಲ ಎಂಬ ದೂರು ರೈತರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳ ನಡೆಗೆ ರೈತರು ಬೇಸತ್ತಿದ್ದಾರೆ. ಅಧಿಕಾರಿಗಳು ರೈತರಿಂದ ಲಂಚ ಪಡೆಯದೆ ಕೆಲಸವನ್ನು ಮಾಡಿಕೊಡಬೇಕೆಂದು ತಹಶೀಲ್ದಾರ್‌ ಕೂಡಲೇ ಸೂಚನೆ ನೀಡಬೇಕು. ಒಂದು ವೇಳೆ ಅಧಿಕಾರಿಗಳ ಪ್ರವೃತ್ತಿ ಬದಲಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಪದಾಧಿಕಾರಿಗಳು: ಗೌರವ ಅಧ್ಯಕ್ಷರಾಗಿ ರಂಗಪ್ಪ, ಅಧ್ಯಕ್ಷರಾಗಿ ಶಶಿಕುಮಾರ್‌, ಉಪಾಧ್ಯಕ್ಷರಾಗಿ ಬಸವರಾಜು, ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ಅಭಿಷೇಕ್‌, ಕಾರ್ಯದರ್ಶಿ ಕುಮಾರ್‌, ಯುವ ಘಟಕದ ಅಧ್ಯಕ್ಷ ಹರೀಶ್‌, ಮರಳವಾಡಿ ಹೋಬಳಿಯಅಧ್ಯಕ್ಷ ಶಿವಕುಮಾರ್‌, ಹಾರೋಹಳ್ಳಿ ಹೋಬಳಿ ಅಧ್ಯಕ್ಷ ಕೆಂಪೇಗೌಡ, ಉಯ್ಯಂಬಳ್ಳಿ ಚಿಕ್ಕ ಲಕ್ಷ್ಮಣ, ಕಸಬಾ ಸಿದ್ದರಾಜು ಆಯ್ಕೆಯಾದರು.

ಜಿಲ್ಲಾ ಮುಖಂಡ ಕುಮಾರ್‌, ಮರಿಯಪ್ಪ, ಮಂಜುನಾಥ್‌, ಚಿನ್ನಪ್ಪ, ಸುನಿಲ್‌, ಸಂತೋಷ್‌, ರಾಘವೇಂದ್ರ ಸ್ವಾಮಿ, ಮುನಿ ಬಸವ, ಶಿವನಗೌಡ, ಸಿಂಗ್ರಯ್ಯ, ಸಿದ್ದರಾಮೇಗೌಡ, ಮುನಿಬಸವೇಗೌಡ, ಬಸವರಾಜು, ರಾಜು, ಬಾಳೇಗೌಡ, ವೀರಭದ್ರಾಚಾರಿ ಇದ್ದರು.

ಸುಂದರ ಪರಿಸರಕ್ಕಾಗಿ ಸ್ವಚ್ಛತೆ ಕಾಪಾಡಲು ಸಹಕರಿಸಿ :

Advertisement

ಮಾಗಡಿ: ಸುಂದರ ಪರಿಸರಕ್ಕಾಗಿ ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಪುರಸಭಾ ಸದಸ್ಯ ಎಚ್‌.ಜೆ.ಪುರುಷೋತ್ತಮ್‌ ತಿಳಿಸಿದರು.

ಪಟ್ಟಣದ 2ನೇ ವಾರ್ಡ್‌ನಲ್ಲಿ ಪ್ರತಿ ಮನೆ,ಮನೆಗೆ ತ್ಯಾಜ್ಯ ಸಂಗ್ರಹದ ತಲಾ ಎರಡು ಬುಟ್ಟಿಗಳನ್ನು ವಿತರಿಸಿ ಮಾತನಾಡಿದ ಅವರು, ಪುರಸಭೆಯಿಂದ ಪ್ರತಿಯೊಂದು ಕುಟುಂಬಕ್ಕೂ ತಲಾ ಎರಡು ತ್ಯಾಜ್ಯದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ. ತಮ್ಮಮನೆಯ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ಬುಟ್ಟಿಗಳಲ್ಲಿ ಸಂಗ್ರಹಿಸಿಡಬೇಕು. ಪ್ರತಿದಿನ ಬೆಳಗ್ಗೆ ತಮ್ಮ ಮನೆ ಬಾಗಿಲಿಗೆಬರುವ ಪುರಸಭಾ ತ್ಯಾಜ್ಯ ಸಂಗ್ರಹದ ವಾಹನಗಳಿಗೆ ಹಾಕಬೇಕು ಎಂದರು.

ಸ್ವಚ್ಛ ಪರಿಸರದಿಂದ ತಮ್ಮ ಮನೆ ಮತ್ತು ಪರಿಸರ ಸುಂದರವಾಗಿ ಕಾಣುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ. ಸ್ವಚ್ಛ ಪರಿಸರಕ್ಕಾಗಿ ಎಲ್ಲರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದರು.

ಮುಖಂಡ ರಂಗಸ್ವಾಮಿ, ಜಯರಾಮು, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next