Advertisement

ತಲ್ಲೂರು: ಸ್ಥಳಾಂತರ, ಪ್ರಧಾನ ಸ್ವಂತ ಕಚೇರಿ ಉದ್ಘಾಟನೆ

07:20 AM Aug 28, 2017 | |

ಕುಂದಾಪುರ: ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿರುವ ಶ್ರೀ ಕಾಳಿಕಾಂಬಾ ವಿವಿಧೋದ್ದೇಶ ಸಹಕಾರಿ ಸಂಘ ಸ್ವಂತ ಕಚೇರಿಯನ್ನು ಹೊಂದಿರುವುದು ಶ್ಲಾಘನೀಯ.

Advertisement

ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ರವಿವಾರ ತಲ್ಲೂರಿನ ಎಂ.ಡಿ.ರೆಸಿಡೆನ್ಸಿಯಲ್ಲಿ ಶ್ರೀ ಕಾಳಿಕಾಂಬಾ ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘ (ನಿ.), ತಲ್ಲೂರು ಇದರ ಸ್ಥಳಾಂತರಗೊಂಡ ನೂತನ ಪ್ರಧಾನ ಸ್ವಂತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಶೈಕ್ಷಣಿಕ ನಿಧಿಯನ್ನು ಕಾದಿರಿ ಸುವ ಮೂಲಕ ಸಮಾಜದ ಶೈಕ್ಷಣಿಕ ಚಟುವಟಕೆಗಳಿಗೆ ಹೆಚ್ಚಿನ ಪ್ರೋತ್ಸಾಹದಾಯಕ ಕೆಲಸಗಳನ್ನು ಮಾಡಲಿ; ಗ್ರಾಹಕರಿಗೆ ಉತ್ತಮ ಸ್ಪಂದನೆ ನೀಡುತ್ತಾ ದೊಡ್ಡ ಸಂಸ್ಥೆಯಾಗಿ ಮೂಡಿಬರಲಿ ಎಂದು ಹಾರೈಸಿದರು.

ಇನ್ನೂ ಎರಡು ಶಾಖೆ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕಾಳಿಕಾಂಬಾ ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಮಾತನಾಡಿ, ಸಂಸ್ಥೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಇದೀಗ ಸ್ವಂತ ಕಚೇರಿಗೆ ಪಾದಾರ್ಪಣೆ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಎರಡು ಶಾಖೆಗಳನ್ನು ತೆರೆಯುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದ್ದು, ಈ ಬಗ್ಗೆ ಕಾರ್ಯೋನ್ಮುಖವಾಗಲಿದೆ ಎಂದರು.

Advertisement

ಅಡ್ಡಿಯಾದ ಆರ್ಥಿಕ ನೀತಿ
ಗಂಗೊಳ್ಳಿ ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ರಾಜು ದೇವಾಡಿಗ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿಯನ್ನು ಎದುರಿಸುತ್ತಿರುವ ಈ ಕಾಲದಲ್ಲಿ ಕೇಂದ್ರ ಸರಕಾರದ ಆರ್ಥಿಕ ನೀತಿ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಬಹಳಷ್ಟು ತೊಡಕಾಗಿದೆ. ಆದರೂ ಸಹಕಾರಿ ಸಂಸ್ಥೆಗಳು ದೇಶದಲ್ಲೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ತಲ್ಲೂರನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಈ ಸಹಕಾರ ಸಂಘ ಮುಂದೆ ಇನ್ನಷ್ಟು ಶಾಖೆಗಳನ್ನು ತೆರೆಯುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಕಟಪಾಡಿ ಶ್ರೀಮದ್‌ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಉಪ್ರಳ್ಳಿಯ ಶ್ರೀ ಕರಸ್ಥಳ ಜಗದ್ಗುರು ನಾಗಲಿಂಗ ಸ್ವಾಮಿ ಹಾಗೂ ಶ್ರೀ ವಿಶ್ವಕರ್ಮ ಸಾನ್ನಿಧ್ಯವಿರುವ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಆಚಾರ್ಯ ಬಡಾಕೆರೆ, ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೀವ ಕೋಟ್ಯಾನ್‌ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ದಿವಾಕರ ಆಚಾರ್ಯ ಮೂಡ್ಲಕಟ್ಟೆ, ಶಾಖಾ ವ್ಯವಸ್ಥಾಪಕ ಯಶೋಧರ ಆಚಾರ್ಯ, ನಿರ್ದೇಶಕರಾದ ಸಿ. ನಾರಾಯಣ ಆಚಾರ್ಯ ಕುಂದಾಪುರ, ಗಂಗಾಧರ ಆಚಾರ್ಯ ಆಲೂರು, ರಮಾನಂದ ಆಚಾರ್ಯ ವಂಡ್ಸೆ, ಪ್ರೇಮಾ ಎಸ್‌. ಬಸೂÅರು, ಶಾರದಾ ಸಿ. ಬಂಟ್ವಾಡಿ ಉಪಸ್ಥಿತರಿದ್ದರು.

ನಿರ್ದೇಶ‌ಕ ರಮೇಶ ಅಚಾರ್ಯ ಸಬ್ಲಾಡಿ ಸ್ವಾಗತಿಸಿದರು. ನಿರ್ದೇಶಕ ಕೆ. ನಾರಾಯಣ ಆಚಾರ್ಯ ಕೋಣಿ ಪ್ರಸ್ತಾವನೆಗೈದರು. ನಾಗೇಂದ್ರ ಆಚಾರ್ಯ ತಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಬಿ. ಜನಾರ್ದನ ಆಚಾರ್ಯ ಬೈಂದೂರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next