ಸುಬ್ರಹ್ಮಣ್ಯ: ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳುವ ಪೂರ್ವದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ನ 19 ಶಾಸಕರು, 8 ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷ ಇಬ್ರಾಹಿಂ ಜತೆಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಳಿಕ ಗೃಹಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಸೀಟು ಹಂಚಿಕೆ
ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕು. ದಸರಾ ಕಳೆದು ಈ ಬಗ್ಗೆ ಚರ್ಚೆ ನಡೆಯ ಲಿದೆ. ನಾನು ಅಥವಾ ಕುಮಾರಸ್ವಾಮಿ ಗೃಹಸಚಿವರ ಜತೆಗೆ ಚರ್ಚಿಸಲಿದ್ದೇವೆ ಎಂದರು.
ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿಯೇ ಇದೆ. ಕಾಂಗ್ರೆಸ್28 ಕ್ಷೇತ್ರ ಗೆಲ್ಲುವ ವಿಶ್ವಾಸದಲ್ಲಿದೆ. ಆ ಕಾರಣಕ್ಕೆ ಬಿಜೆಪಿ-ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
ಐ ಆ್ಯಮ್ 91: ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗೌಡರು, “ನಾನು ಇರುವುದು ಬೆಂಗಳೂರಲ್ಲಿ, ಯಾರನ್ನೂ ಭೇಟಿಯಾಗಿಲ್ಲ. ಐಎನ್‌ಡಿಐಎ, ಯುಪಿಎ ಬಗ್ಗೆ ಹೆಚ್ಚು ತಲೆಕೊಂಡಿಲ್ಲ. ಐ ಆ್ಯಮ್ 91 ಕ್ಷಮಿಸಿ’ ಎಂದರು.
ಶ್ಲೋಕ ಓದಿದ ಗೌಡರು: ಬೆಳಗ್ಗೆ ಕಾರಿನಲ್ಲಿ ಕುಳಿತು ಪತ್ನಿಯ ಬರವಿಗೆ ಕಾಯುತ್ತಿದ್ದ ಗೌಡರು ಶ್ಲೋಕ ಓದುತ್ತಿರುವ ಫೋಟೋ ವೈರಲ್ ಆಗಿದೆ.