ಕಾಬೂಲ್: ಅಫ್ಘಾನಿಸ್ಥಾನ ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಮೂರು ವಾರಗಳ ಬಳಿಕ ತಾಲಿಬಾನ್ ತನ್ನದೇ ಆದ ಸರ್ಕಾರವನ್ನು ರಚಿಸಲು ಮುಂದಾಗಿದೆ. ಇಂದು ( ಸೆ.3) ತಾಲಿಬಾನ್ ಸರ್ಕಾರ ರಚಿಸಲಿದೆ ಎಂದು ವರದಿ ತಿಳಿಸಿದೆ.
ಶುಕ್ರವಾರದ ಪ್ರಾರ್ಥನೆಯ ನಂತರ ತಾಲಿಬಾನ್ ಸರ್ಕಾರ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 15 ರಂದು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಸುಮಾರು ಎರಡು ದಶಕಗಳ ಬಳಿಕ ಅಮೆರಿಕವು ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಅಮೆರಿಕದಲ್ಲಿ ತನ್ನ ನಿಯಂತ್ರಣ ಸಾಧಿಸಿದೆ. ಒಂದೊಂದೇ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದ ತಾಲಿಬಾನ್ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ನ್ನು ವಶಕ್ಕೆ ಪಡೆದಿತ್ತು.
ಇದನ್ನೂ ಓದಿ:ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಬೀಳಲಿ
ಸೋಮವಾರದಂದು ಅಮೆರಿಕ ತನ್ನ ಕೊನೆಯ ಸೇನಾ ತುಕಡಿಯನ್ನೂ ಹಿಂದಕ್ಕೆ ಕರೆಸಿಕೊಂಡಿದೆ. ಸದ್ಯ ಅಫ್ಘಾನ್ ನಲ್ಲಿ ಉಳಿದಿರುವ ಯಾವುದೇ ವಿದೇಶಿಯರಿಗೆ ತೆರಳಲು ದೇಶದಿಂದ ಸುರಕ್ಷಿತ ಮಾರ್ಗವನ್ನು ಅನುಮತಿಸುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಆದರೆ ಕಾಬೂಲ್ ವಿಮಾನ ನಿಲ್ದಾಣ ಇನ್ನೂ ಮುಚ್ಚಿರುವುದರಿಂದ, ಅನೇಕರು ನೆರೆಯ ದೇಶಗಳಿಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದರು.