Advertisement

ಅಫ್ಘಾನಿಸ್ತಾನದಲ್ಲಿ ಬ್ಯೂಟಿ ಪಾರ್ಲರ್ ಬ್ಯಾನ್: ಮಹಿಳೆಯರ ಪ್ರತಿಭಟನೆ

10:51 PM Jul 19, 2023 | Team Udayavani |

ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೂರಾರು ಮಹಿಳೆಯರು ಬುಧವಾರ ಬ್ಯೂಟಿ ಪಾರ್ಲರ್ ಗಳ ನಿಷೇಧವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ತಾಲಿಬಾನ್ ರಾಷ್ಟ್ರವ್ಯಾಪಿ ಬ್ಯೂಟಿ ಪಾರ್ಲರ್ ಅನ್ನು ಮುಚ್ಚಲು ಆದೇಶಿಸಿದ ನಂತರ ಹಲವೆಡೆ ನಡೆದ ಪ್ರತಿಭಟನೆಯನ್ನು ತಡೆಯಲು ಭದ್ರತಾ ಪಡೆಗಳು ಜಲಫಿರಂಗಿಗಳನ್ನು ಬಳಸಿದ್ದು, ಕೆಲವೆಡೆ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದೆ.

Advertisement

ತಾಲಿಬಾನ್ ಈ ತಿಂಗಳ ಆರಂಭದಲ್ಲಿ ಅವರು ಅಫ್ಘಾನಿಸ್ತಾನದ ಎಲ್ಲಾ ಪಾರ್ಲರ್ ಗಳನ್ನು ಮುಚ್ಚಲು ಒಂದು ತಿಂಗಳ ಕಾಲಾವಕಾಶವನ್ನು ನೀಡುವುದಾಗಿ ಹೇಳಿತ್ತು. ಈ ವಿಚಾರಕ್ಕೆ ಮಹಿಳಾ ಉದ್ಯಮಿಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಚಿಂತಿತರಾಗಿದ್ದ ಅಂತಾರಾಷ್ಟ್ರೀಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.

ತಾಲಿಬಾನ್ ಸಲೂನ್‌ಗಳನ್ನು ಕಾನೂನುಬಾಹಿರಗೊಳಿಸುತ್ತಿದ್ದು, ಇದು ಇಸ್ಲಾಂನಿಂದ ನಿಷೇಧಿಸಲ್ಪಟ್ಟ ಸೇವೆಗಳನ್ನು ನೀಡುತ್ತಿದೆ ಮತ್ತು ಮದುವೆ, ಹಬ್ಬಗಳ ಸಮಯದಲ್ಲಿ ವರನ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳಿದೆ.

ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಜಾದಾನ ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲಿನ ಇತ್ತೀಚಿನ ನಿರ್ಬಂಧ, ಶಿಕ್ಷಣ, ಸಾರ್ವಜನಿಕ ಸ್ಥಳಗಳು ಮತ್ತು ಹೆಚ್ಚಿನ ಉದ್ಯೋಗಗಳಿಂದ ಅವರನ್ನು ನಿರ್ಬಂಧಿಸುವ ಶಾಸನಗಳ ನಂತರ ಈ ಬೆಳವಣಿಗೆ ನಡೆದಿದೆ.

ತನ್ನನ್ನು ಫರ್ಜಾನಾ ಎಂದು ಗುರುತಿಸಿಕೊಂಡ ಪ್ರತಿಭಟನಾ ನಿರತ ಮಹಿಳೆ “ನಾವು ನ್ಯಾಯಕ್ಕಾಗಿ ಇಲ್ಲಿದ್ದೇವೆ. ನಾವು ಕೆಲಸ, ಆಹಾರ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತೇವೆ. ಸಭೆಯನ್ನು ಚದುರಿಸಲು ತಾಲಿಬಾನ್‌ಗಳು ಮಹಿಳೆಯರ ಮೇಲೆ ಜಲಫಿರಂಗಿಗಳನ್ನು ಸಿಂಪಡಿಸಿದರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಅಫ್ಘಾನಿಸ್ತಾನದ ಮಹಿಳೆಯರು ಯುಎನ್ ಮಿಷನ್‌ಗೆ ಹೋಗುತ್ತಿದ್ದೇವೆ ಎಂದು ಪ್ರತಿಭಟನಾಕಾರರನ್ನು ಒಟ್ಟಿಗೆ ಇರುವಂತೆ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next