Advertisement
ಟಿಕ್ ಟಾಕ್ ಮತ್ತು ಪಬ್ ಜಿ ಆ್ಯಪ್ ಗಳ ಬಳಕೆಯಿಂದ ಅಫ್ಘಾನ್ ಯುವಕರು “ದಾರಿ ತಪ್ಪುತ್ತಿದ್ದಾರೆ” ಎಂದು ತಾಲಿಬಾನ್ ಹೇಳಿಕೊಂಡಿದೆ.
Related Articles
Advertisement
ವ್ಯಾಪಕ ಯುವ ಆಫ್ಘನ್ ಬಳಕೆದಾರರನ್ನು ಹೊಂದಿರುವ ಟಿಕ್ ಟಾಕ್ ಮತ್ತು ಪಬ್ ಜಿ ಮೇಲಿನ ನಿಷೇಧವನ್ನು ಮುಂದಿನ 90 ದಿನಗಳಲ್ಲಿ ಜಾರಿಗೊಳಿಸಲಾಗುತ್ತದೆ. ತಾಲಿಬಾನ್ ನೇತೃತ್ವದ ಮಧ್ಯಂತರ ಸರ್ಕಾರವು ನಿಗದಿತ ಸಮಯದೊಳಗೆ ಮಾರ್ಗಸೂಚಿಗಳನ್ನು ಅನುಸರಿಸಲು ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ.
“ಅನೈತಿಕ ವಿಷಯವನ್ನು” ಪ್ರದರ್ಶಿಸುವ ಕಾರಣಕ್ಕೆ ತಾಲಿಬಾನ್ ಸುಮಾರು 23 ಮಿಲಿಯನ್ ವೆಬ್ ಸೈಟ್ ಗಳನ್ನು ನಿರ್ಬಂಧಿಸಿದ ಬಳಿಕ ಇದೀಗ ಟಿಕ್ ಟಾಕ್ ಮತ್ತು ಪಬ್ ಜಿ ಗೆ ನಿಷೇಧದ ಬಿಸಿ ತಾಗಿದೆ.