ನವ ದೆಹಲಿ : ಅಫ್ಗಾನಿಸ್ತಾನದ ಬಹುತೇಕ ಎಲ್ಲಾ ಪ್ರದೇಶಗಳನ್ನು (ಪಂಜ್ ಶಿರ್ ಹೊರತುಪಡಿಸಿ) ತಾಲಿಬಾನ್ ಉಗ್ರ ಪಡೆ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ದೇಶದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ ಪಡೆ, ಸದ್ಯಕ್ಕೆ ತುಸು ವಿಳಂಬ ಮಾಡಿದೆ. ಸರ್ಕಾರ ರಚನೆಗೂ ಮುನ್ನಾ ಇತರೆ ದೇಶಗಳ ಬೆಂಬಲಕ್ಕೆ ಕೈ ಚಾಚಿದೆ ಎಂಬ ವರದಿಯಾಗಿದೆ.
ತಾಲಿಬಾನ್ ನ ರಾಜಕೀಯ ಕಚೇರಿಯಲ್ಲಿ ಇಂದು (ಸಪ್ಟೆಂಬರ್ 3, ಶುಕ್ರವಾರ) ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಚೀನಾದ ನಿಯೋಗಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಣಯಕ್ಕೆ ಬಂದಿದೆ. ಸರ್ಕಾರ ರಚನೆಗೂ ಮುನ್ನಾ ಇತರೆ ದೇಶಗಳ ಬೆಂಬಲವನ್ನು ತಾಲಿಬಾನ್ ಕೇಳಿದೆ.
ಇದನ್ನೂ ಓದಿ : ನಾವು ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರು,ಗಣೇಶ ಹಬ್ಬ ಮಾಡಿಯೇ ಮಾಡುತ್ತೇವೆ: ಈಶ್ವರಪ್ಪ
ರಾಜಕೀಯ ಕಚೇರಿ (ಪಿಒ)ಯ ಉಪ ನಿರ್ದೇಶಕ ಎಮ್ ಅಬ್ಬಾಸ್ ಸ್ಟಾನಿಕ್ ಜಾಯ್, ಯುಕೆ ಪ್ರಧಾನ ಮಂತ್ರಿಯ ವಿಶೇಷ ಪ್ರತಿನಿಧಿ ಸೈಮನ್ ಗಸ್ ಮತ್ತು ಅಫ್ಘಾನಿಸ್ತಾನದ ಜರ್ಮನ್ ರಾಯಭಾರಿ ಮಾರ್ಕಸ್ ಪೊಟ್ಜೆಲ್ ಅವರನ್ನು ಅಫ್ಗಾನಿಸ್ತಾನದ ದೋಹಾದಲ್ಲಿ ಭೇಟಿ ಮಾಡಿದರು.
ದೇಶದಲ್ಲಿನ ಸದ್ಯದ ಪರಿಸ್ಥಿತಿ, ಕಾಬೂಲ್ ವಿಮಾನ ಪುನರ್ ಅಭಿವೃದ್ಧಿಹಾಗೂ ರಾಜತಾಂತ್ರಿಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಭವಿಷ್ಯದಲ್ಲಿ ಐಇಎ ಜೊತೆ ಸಹಕರಿಸಲು ಸಿದ್ಧರಾಗಿದ್ದಾರೆ ಮತ್ತು ಜರ್ಮನ್ ನಿಯೋಗವು ಅಫ್ಘಾನಿಸ್ತಾನಕ್ಕೆ ತಮ್ಮ ನಾಗರಿಕ ನೆರವನ್ನು ಹೆಚ್ಚಿಸಲು ಮತ್ತು ಮುಂದುವರಿಸಲು ಒತ್ತು ನೀಡಲಾಗಿದೆ ಎಂದು ವರದಿಯಾಗಿದೆ.
ಇನ್ನು, ಪಿಒ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಉಪ ವಿದೇಶಾಂಗ ಸಚಿವ ವು ಜಿಯಾಂಗ್ ಹಾವೊ ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿತ್ತು. ಎರಡೂ ಕಡೆಯವರು ದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಾಲಿಬಾನ್ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಕಾಲುಗಳು ಇಲ್ಲದಿದ್ದರೆ ಏನಂತೆ ?ಪ್ಯಾರಾಲಿಂಪಿಕ್ ನಲ್ಲಿ ಚಿನ್ನ ಗೆದ್ದ ಅವನಿ ಯಶಸ್ಸಿನ ಪಯಣ