Advertisement
ಜಲಾಲಾಬಾದ್ ನಲ್ಲಿ ಅಫ್ಗಾನಿಸ್ತಾನ ಸೇನೆ ತಾಲಿಬಾನ್ ಗೆ ಯಾವುದೇ ಪ್ರತಿರೋಧ ಒಡ್ಡಿಲ್ಲವೆಂದು ತಿಳಿದುಬಂದಿದ್ದು, ಹೀಗಾಗಿ, ಜಲಾಲಾಬಾದ್ ನಗರವು ಯಾವುದೇ ಪರಿಶ್ರಮವಿಲ್ಲದೇ ತಾಲಿಬಾನ್ ಪಾಲಾಗಿದೆ.
Related Articles
Advertisement
ಜಲಾಲಾಬಾದ್ ನನ್ನು ತಾಲಿಬಾನ್ ಉಗ್ರ ಸಂಘಟನೆ ವಶಪಡಿಸಿಕೊಂಡ ಬೆನ್ನಿಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ಪ್ರತಿಕ್ರಿಯಿಸಿದ ಅಫ್ಗಾನ್ ಅಧಿಕಾರಿಯೊಬ್ಬರು, ‘ಜಲಾಲಾಬಾದ್‌ನಲ್ಲಿ ಯಾವುದೇ ಘರ್ಷಣೆಗಳು ನಡೆಯುತ್ತಿಲ್ಲ. ಏಕೆಂದರೆ, ರಾಜ್ಯಪಾಲರು ತಾಲಿಬಾನ್‌ಗೆ ಶರಣಾಗಿದ್ದಾರೆ’ ಎಂದು ಹೇಳಿದ್ದಾರೆ.
ಇನ್ನು, ಅಫ್ಘಾನಿಸ್ಥಾನವನ್ನು ತನ್ನ ಮುಷ್ಟಿಗೆ ಪಡೆಯಲು ಸನ್ನದ್ಧವಾಗಿರುವ ತಾಲಿಬಾನ್, ಈಗ ಸಂಧಾನಕ್ಕೆ ಹೊಸ ಷರತ್ತುಗಳನ್ನು ವಿಧಿಸಿದೆ. ಉಗ್ರರು ವಿಧಿಸಿರುವ ಷರತ್ತು ಅಫ್ಘಾನ್‌ನ ಅಶ್ರಫ್ ಘನಿ ನೇತೃತ್ವದ ಸರಕಾರಕ್ಕೆ “ನುಂಗಲಾರದ ತುತ್ತಾಗಿ’ ಪರಿಣಮಿಸಿದೆ.
ಸಂಧಾನದ ಮೂಲಕ ಶಾಂತಿ ಕಾಪಾಡುವ ವಿಚಾರಕ್ಕೆ ಸಂಬಂಧಿಸಿ ಜಾಗತಿಕ ಒತ್ತಡ ಹೆಚ್ಚಿರುವಂತೆಯೇ, ತಾಲಿಬಾನ್ ಹೊಸ ಷರತ್ತುಗಳ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೈಲಲ್ಲಿರುವ ಉಗ್ರರ ಬಿಡುಗಡೆ, ಹೊಸ ಸರಕಾರದಲ್ಲಿ ಪ್ರಮುಖ ಎಲ್ಲ ಹುದ್ದೆಗಳಿಗೆ ಬೇಡಿಕೆ ಹಾಗೂ ವಿಶ್ವಸಂಸ್ಥೆಯ “ಉಗ್ರ ಪಟ್ಟಿ’ಯಿಂದ ಹೊರಗಿಡುವಂತೆ ಷರತ್ತು ವಿಧಿಸಿದೆ. ವಿಶೇಷವೆಂದರೆ, ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಭಯೋತ್ಪಾದನೆಯ ಬೆಂಬಲಿಗರು ಎಂದು ಪಟ್ಟಿ ಮಾಡುವ 1267 ನಿರ್ಬಂಧ ಸಮಿತಿಯ ನೇತೃತ್ವವನ್ನು ಸದ್ಯ ಭಾರತ ಹೊತ್ತಿದೆ.
ಇದನ್ನೂ ಓದಿ : ಧ್ವಜಾರೋಹಣಕ್ಕೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್ ಮಹಿಳಾ ಘಕದಿಂದ ಘೇರಾವ್!