ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಅಫ್ಘಾನ್ ಸರ್ಕಾರದ ಮಾಧ್ಯಮ ಮತ್ತು ಮಾಹಿತಿ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆ ಶುಕ್ರವಾರ(ಆಗಸ್ಟ್ 06) ಕಾಬೂಲ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಹೇಂದ್ರ ಸಿಂಗ್ ಧೋನಿ ಟ್ವಿಟರ್ ಖಾತೆಯಿಂದ ‘ಬ್ಲೂ ಟಿಕ್’ ಮಾಯ!
ಸರ್ಕಾರಿ ಮಾಧ್ಯಮ ಮತ್ತು ಮಾಹಿತಿ ಕೇಂದ್ರದ (ಜಿಎಂಐಸಿ) ಮುಖ್ಯಸ್ಥ ದವಾ ಖಾನ್ ಮೆನಾಪಾಲ್ ಅವರನ್ನು ಉಗ್ರರು ಹತ್ಯೆಗೈದಿರುವುದಾಗಿ ಫೆಡರಲ್ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಖಾನ್ ಅವರನ್ನು ಭಯೋತ್ಪಾದಕರು ಕೊಂದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಮೆನಾಪಾಲ್ ಯುವಕನಾಗಿದ್ದು, ಉಗ್ರರ ಪ್ರಚಾರದ ವಿರುದ್ಧ ಬಂಡೆಯಂತೆ ನಿಂತಿದ್ದ ಅವರು ಅಫ್ಘಾನ್ ಸರ್ಕಾರದ ಬೆಂಬಲಿಗರಾಗಿದ್ದರ ಎಂದು ಆಂತರಿಕ ಸಚಿವಾಲಯದ ವಕ್ತಾರ ಮಿರ್ವೈಸ್ ಸ್ಟಾನಿಕ್ ಝೈ ವಿವರಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಲಿಬರಲ್ (ಉದಾರವಾದಿ) ಇಸ್ಲಾಮಿಕ್ ಆಡಳಿತವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಸಾರ್ವಜನಿಕರು ತಾಲಿಬಾನ್ ಉಗ್ರರಿಂದ ಕೊಲ್ಲಲ್ಪಟ್ಟಿರುವುದಾಗಿ ವರದಿ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆ ವಾಪಸ್ ತೆರಳಿದ ನಂತರ ದಶಕಗಳ ಕಾಲ ಶಾಂತವಾಗಿದ್ದ, ದೇಶದಲ್ಲಿ ಈಗ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ಸಾವಿರಾರು ಮಂದಿ ಮನೆ ಬಿಟ್ಟು ಓಡಿ ಹೋಗುವಂತಾಗಿದೆ. ಹಲವರನ್ನು ಬಲವಂತವಾಗಿ ಹೊರದಬ್ಬಲಾಗಿದೆ, ನೂರಾರು ಮಂದಿಯನ್ನು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.