Advertisement

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

02:51 PM Oct 20, 2021 | Team Udayavani |

ಕಾಬೂಲ್: ತಾಲಿಬಾನ್ ಉಗ್ರರ ರಣಕೇಕೆ ಮುಂದುವರಿದಿದ್ದು, ಅಫ್ಘಾನಿಸ್ತಾನದ ಜ್ಯೂನಿಯರ್ ಮಹಿಳಾ
ರಾಷ್ಟ್ರೀಯ ವಾಲಿಬಾಲ್ ತಂಡದ ಸದಸ್ಯೆಯ ಶಿರಚ್ಛೇದ ಮಾಡಿರುವ ಘಟನೆ ನಡೆದಿರುವುದಾಗಿ ತರಬೇತುದಾರ
ಪರ್ಷಿಯನ್ ಇಂಡಿಪೆಂಡೆಂಟ್ ಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಪ್ರೇಮ ವೈಫಲ್ಯ : ಕೊಡಗಿನ ಯುವಕ ಮಧ್ಯಪ್ರದೇಶದಲ್ಲಿ ಆತ್ಮಹತ್ಯೆ

ಘಟನೆಯ ವಿವರ: ಸಂದರ್ಶನದಲ್ಲಿ ಮಾಹಿತಿ ನೀಡಿರುವ ಕೋಚ್ ಸೂರ್ಯ ಅಫ್ಜಝಲಿ(ಹೆಸರು ಬದಲಾಯಿಸಲಾಗಿದೆ) ಪ್ರಕಾರ, ಮಹಿಳಾ ವಾಲಿಬಾಲ್ ಆಟಗಾರ್ತಿ ಮಹಜಬೀನ್ ಹಕೀಮ್ ಎಂಬಾಕೆಯನ್ನು ತಾಲಿಬಾನ್ ಅಕ್ಟೋಬರ್ ಮೊದಲ ವಾರದಲ್ಲಿಯೇ ಹತ್ಯೆಗೈದಿತ್ತು. ಆದರೆ ಈ ವಿಷಯದ ಬಗ್ಗೆ ಯಾರಿಗೂ ಬಾಯ್ಬಿಡಬಾರದು ಎಂದು ಉಗ್ರರು ಮಹಜಬೀನ್ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಒಡ್ಡಿದ್ದರು ಎಂದು ವರದಿ ವಿವರಿಸಿದೆ.

ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರ ಪತನವಾಗುವುದಕ್ಕೆ ಮೊದಲು ಮಹಜಬೀನ್ ಕಾಬೂಲ್ ಮುನ್ಸಿಪಲ್
ವಾಲಿಬಾಲ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ ಈಕೆ ಕ್ಲಬ್ ನ ಸ್ಟಾರ್ ಆಟಗಾರ್ತಿಯಾಗಿದ್ದಳು. ಆದರೆ ಇದೀಗ ದೇಹ ಮತ್ತು ರುಂಡ ಬೇರೆ, ಬೇರೆಯಾದ ಭೀಬತ್ಸ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.

ಆಗಸ್ಟ್ ನಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕುವ ಮುನ್ನ ಕೇವಲ ಇಬ್ಬರು ಆಟಗಾರರು ಮಾತ್ರ ದೇಶ ಬಿಟ್ಟು ಪರಾರಿಯಾಗಲು ಸಾಧ್ಯವಾಗಿತ್ತು. ಮಹಜಬೀನ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಅಫ್ಘಾನಿಸ್ತಾನದಲ್ಲಿಯೇ ಉಳಿಯುವಂತಾಗಿತ್ತು ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next