ಕಾಬೂಲ್ : ಉತ್ತರ ಅಫ್ಘಾನಿಸ್ಥಾನದ ಮದರಸಾದಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಸಮಂಗನ್ ಪ್ರಾಂತ್ಯದ ರಾಜಧಾನಿ ಅಯ್ಬಕ್‌ನಲ್ಲಿರುವ ಮದರಸಾದಲ್ಲಿ ನಡೆದ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ.
2021 ರ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಫ್ಘಾನ್ ಅಂಗಸಂಸ್ಥೆಯು ಹಿಂಸಾಚಾರದ ಅಭಿಯಾನವನ್ನು ನಡೆಸುತ್ತಿದೆ. ನಿರ್ದಿಷ್ಟವಾಗಿ ಅಫ್ಘಾನ್ ಮುಸ್ಲಿಂ ಸುನ್ನಿ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಐಎಸ್ ಬಾಂಬ್ ದಾಳಿಗಳನ್ನು ನಡೆಸಿದೆ. ಸುನ್ನಿ ಮಸೀದಿಗಳು ಮತ್ತು ಮದರಸಾಗಳನ್ನು ಗುರಿಯಾಗಿರಿಸಿಕೊಂಡಿದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪು ಎರಡೂ ಕಠಿಣವಾದ ಸಿದ್ಧಾಂತಕ್ಕೆ ಬದ್ಧವಾಗಿವೆ ಆದರೆ ಪ್ರತಿಸ್ಪರ್ಧಿಗಳಾಗಿವೆ.