Advertisement

ತಲಾಖ್‌: ಮತ್ತೂಂದು ದಿನದ ಕಲಾಪ ವ್ಯರ್ಥ

07:10 AM Jan 05, 2018 | Harsha Rao |

ನವದೆಹಲಿ: ತ್ರಿವಳಿ ತಲಾಖ್‌ ನಿಷೇಧಿಸುವ ಮುಸ್ಲಿಂ ಮಹಿಳಾ (ಹಕ್ಕುಗಳು ಮತ್ತು ವಿವಾಹ ರಕ್ಷಣೆ) ಮಸೂದೆ ಬಗ್ಗೆ ನಡೆದ ವಾಗ್ವಾದದಿಂದಾಗಿ ಗುರುವಾರವೂ ಕಲಾಪ ವ್ಯರ್ಥವಾಗಿದೆ. ಬುಧವಾರ ಮಸೂದೆಯನ್ನು ಮಂಡಿಸಲಾಗಿತ್ತಾದರೂ, ಆಯ್ಕೆ ಸಮಿತಿಗೆ ಮಸೂದೆಯನ್ನು ಕಳುಹಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು. ಗುರುವಾರ ಕೂಡ ಸಚಿವೆ ಸ್ಮತಿ ಇರಾನಿ ಮತ್ತು ಟಿಎಂಸಿ ಸದಸ್ಯ ಡೆರೆಕ್‌ ಓಬ್ರಿಯಾನ್‌ ಮಧ್ಯೆ ತೀವ್ರ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿ ಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದವು. ಈ ಸಂಬಂಧ ನಿಲುವಳಿ ಮಂಡಿಸಲು ಕಾಂಗ್ರೆಸ್‌ ಕೋರಿದಾಗ ಬಿಜೆಪಿ ಆಕ್ಷೇಪಿಸಿತು.

Advertisement

ನಂತರ ಸುಗಮ ಕಲಾಪಕ್ಕೆ ಸಂಬಂಧಿಸಿ ವಿವಿಧ ಪಕ್ಷಗಳೊಂದಿಗೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಚರ್ಚೆ ನಡೆಸಿದರು. ದೊಡ್ಡ ಪಕ್ಷಗಳು ಗದ್ದಲ ಎಬ್ಬಿಸುವುದರಿಂದಾಗಿ ಸಣ್ಣ ಪಕ್ಷಗಳು ತಮ್ಮ ವಿಷಯಗಳ ಬಗ್ಗೆ ಚರ್ಚಿ ಸಲು ಸಾಧ್ಯವಾಗುತ್ತಿಲ್ಲ. ತಲಾಖ್‌ ವಿಚಾರ ಕುರಿತು ಪ್ರತಿಪಕ್ಷಗಳು- ಸರ್ಕಾರ ಒಮ್ಮತಕ್ಕೆ ಬರಬೇಕು ಎಂದೂ ಆಗ್ರಹಿಸಿದರು.

ಈ ಮಧ್ಯೆ ನ್ಯಾಯಾಧೀಶರ ವೇತನ ಹೆಚ್ಚಳ ಮಾಡುವ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಾಧೀಶರ (ಸಂಬಳ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದ ವೇಳೆ, ಶಾಸಕಾಂಗದ ಮೇಲೆ ನ್ಯಾಯಾಂಗ ಹೆಚ್ಚಿನ ಅಧಿಕಾರ ಹೊಂದಲು ಬಯಸುತ್ತಿದೆ ಎಂಬ ಆರೋಪಗಳನ್ನು ಎಲ್ಲ ಪಕ್ಷದ ಸಂಸದರು ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next