Advertisement

ಮೋದಿ ‘ಐ-ಪ್ಯಾಡ್‌ ಪ್ರೆಸೆಂಟೇಷನ್‌’ಬೆರಗು

09:05 AM Mar 01, 2020 | Hari Prasad |

ಹೊಸದಿಲ್ಲಿ: ತತ್‌ಕ್ಷಣಕ್ಕೆ ಕವಿತೆ ಬರೆಯುವ ಆಶುಕವಿಗಳನ್ನು, ಹಠಾತ್ತಾಗಿ ಭಾಷಣ ಮಾಡಬೇಕಾದ ಅನಿವಾರ್ಯತೆ ಒದಗಿಬಂದಾಗ ಕೊಂಚವೂ ಅಳುಕದೆ ಅದ್ಭುತವಾಗಿ ಭಾಷಣ ಮಾಡುವಂಥ ಆಶುಭಾಷಣಕಾರರನ್ನು ನಾವು ನೋಡಿರುತ್ತೇವೆ. ಇವರ ಸಾಲಿಗೆ ಈಗ ಪ್ರಧಾನಿ ನರೇಂದ್ರ ಮೋದಿ ಕೂಡ ಸೇರ್ಪಡೆಗೊಂಡಿದ್ದಾರೆ.

Advertisement

ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಅವರೊಂದಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸುವಾಗ ಮೋದಿ ತಮ್ಮ ಜೇಬಿನಲ್ಲಿದ್ದ ಐಪ್ಯಾಡ್‌ ಹೊರಗೆ ತೆ‌ಗೆದು, ದೇಶದ ವ್ಯಾಪಾರ ವಹಿವಾಟಿನ ಲೆಕ್ಕವನ್ನು ಅಂಕಿ-ಅಂಶಗಳ ಸಮೇತ ಅದ್ಭುತವಾಗಿ ವಿವರಿಸಿದ್ದಾರೆ.

2014ರಲ್ಲಿ ತಾವು ಅಧಿಕಾರಕ್ಕೆ ಬಂದಾಗ ಭಾರತ-ಅಮೆರಿಕದ ನಡುವೆ 2.2 ಲಕ್ಷ ಕೋಟಿ ರೂ.ಗಳಷ್ಟು ಇದ್ದ ವ್ಯಾಪಾರ ಕೊರತೆಯನ್ನು 2018ರ ಹೊತ್ತಿಗೆ 1.7 ಲಕ್ಷ ಕೋಟಿ ರೂ.ಗಳಿಗೆ ತಂದು ನಿಲ್ಲಿಸಿ, ನಾಲ್ಕೇ ವರ್ಷಗಳಲ್ಲಿ ಶೇ.22ರಷ್ಟು ಕೊರತೆ ನೀಗಿಸಿದ್ದಾಗಿ ಹೇಳಿದ್ದಾರೆ.
ಅಲ್ಲದೆ, 2013ರಲ್ಲಿ ಅಮೆರಿಕದಿಂದ ಭಾರತ ಪಡೆಯುತ್ತಿದ್ದ ಹೈಡ್ರೋಕಾರ್ಬನ್‌ ಪರಿಕರಗಳ ವ್ಯಾಪಾರ ಶೂನ್ಯಕ್ಕಿಳಿದಿದ್ದನ್ನು 2020ರ ಹೊತ್ತಿಗೆ 65,000 ಕೋಟಿ ರೂ.ಗಳಿಗೆ ಮುಟ್ಟಿಸಲಾಗಿದೆ ಎಂದಿದ್ದಾರೆ.

ಈ ವರ್ಷಾಂತ್ಯದ ಹೊತ್ತಿಗೆ ಹೈಡ್ರೋಕಾರ್ಬನ್‌ ಸೇರಿದಂತೆ ತೈಲ, ಕಲ್ಲಿದ್ದಲು, ದ್ರವೀಕೃತ ನೈಸರ್ಗಿಕ ಅನಿಲದ ಆಮದು ವ್ಯಾಪಾರವನ್ನು 87 ಸಾವಿರ ಕೋಟಿ ರೂ.ಗಳಿಗೆ ಮುಟ್ಟಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next