Advertisement

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

08:38 AM May 04, 2024 | Team Udayavani |

ಒಟ್ಟಾವ: ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಿಟ್ ಸ್ಕ್ವಾಡ್‌ನ ಸದಸ್ಯರು ಎಂದು ಶಂಕಿಸಲಾಗಿರುವ ಮೂವರು ಭಾರತೀಯರನ್ನು ಬಂಧಿಸಿರುವುದಾಗಿ ಕೆನಡಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Advertisement

ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು 2023ರ ಜೂನ್ 18 ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು ಅಲ್ಲದೆ ಈ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪವನ್ನು ಮಾಡಿದ್ದರು ಇದರ ನಂತರ ಈ ವಿಚಾರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಗದ್ದಲದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಅಷ್ಟು ಮಾತ್ರವಲ್ಲದೆ ಕೆನಡಾ ಆರೋಪವನ್ನು ಭಾರತ ಅಸಂಬದ್ಧ, ಅಪ್ರಚೋದಿತ ಎಂದು ತಳ್ಳಿ ಹಾಕಿದೆ ಜೊತೆಗೆ ಭಾರತವೇ ನಿಜ್ಜರ್ ಹತ್ಯೆ ಮಾಡಿರುವುದೆಂದು ನಿಖರವಾದ ಸಾಕ್ಷಿ ನೀಡಿ ಎಂದು ಕೆನಡಾಕ್ಕೆ ಭಾರತ ಪ್ರಶ್ನೆ ಮಾಡಿದೆ.

ಬಂಧಿತ ಮೂವರು ಭಾರತೀಯರನ್ನು ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಹಾಗೂ ಕರಣ್‌ಪ್ರೀತ್ ಸಿಂಗ್ (28) ಎಂದು ಹೇಳಲಾಗಿದ್ದು ಈ ಮೂವರು ಕೆನಡಾದ ಆಲ್ಬರ್ಟಾದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂದು ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ತನಿಖೆ ನಡೆಸಿ ವಶಕ್ಕೆ ಪಡೆದಿರುವ ಮೂವರು ಸೇರಿದಂತೆ ಭಾರತದ ಪಾತ್ರವಿರುವ ಕುರುತು ಸಮಗ್ರ ತನಿಖೆ ನಡೆಸಲಾಗುವುದೆಂದು ಪೊಲೀಸ್ ಸಹಾಯಕ ಆಯುಕ್ತ ಡೇವಿಡ್ ಟೆಬೋಲ್ ತಿಳಿಸಿದ್ದಾರೆ.

ಇದನ್ನೂ ಓದಿ: Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Advertisement

Udayavani is now on Telegram. Click here to join our channel and stay updated with the latest news.

Next