Advertisement

ನಕಲಿ ಪತ್ರದ ಮೂಲಕ ತೇಜೋವಧೆ

10:31 AM Jul 31, 2017 | |

ದಾವಣಗೆರೆ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡಲು ಒತ್ತಾಯಿಸಿ ಮಾತೆ ಮಹಾದೇವಿಯವರ ಹೋರಾಟ ಸಹಿಸದೆ ರಂಭಾಪುರಿ ಶ್ರೀಗಳು ಮಾತೆ ಮಹಾದೇವಿಯವರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಯಕ ದಾಸೋಹ ಮಂಟಪ, ವಚನ ವೇದಿಕೆಯ ಚಂದ್ರಾದೇವಿ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆಗ ರಂಭಾಪುರಿ ಶ್ರೀ ಮತ್ತು ವೀರಶೈವ ಮಹಾಸಭಾದವರು ವೀರಶೈವ ಲಿಂಗಾಯತ ಎಂದು ಮಾನ್ಯತೆ ನೀಡಲು ಒತ್ತಾಯಿಸಿದರು. ಆಗ ಮುಖ್ಯಮಂತ್ರಿಗಳು ಇಬ್ಬರೂ ಒಮ್ಮತದ ತೀರ್ಮಾನಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದರು. ಅದರಂತೆ ಮಾತೆ ಮಹಾದೇವಿಯವರು ಮತ್ತು ಕೆಲ ಮಠಾಧಿಪತಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಬೃಹತ್‌ ರ್ಯಾಲಿ  ನಡೆಸಿದರು. 2 ಲಕ್ಷ ಜನ ಅಂದಿನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡು ಸಹಿಸದ ರಂಭಾಪುರಿ ಶ್ರೀಗಳು ಮಾತೆ ಮಹಾದೇವಿ ಯವರ ತೇಜೋವಧೆಗೆ ಮುಂದಾದರು. ಮಹಾದೇವಿಯವರ ಘನತೆ ಗೌರಕ್ಕೆ ಧಕ್ಕೆ ಬರುವಂತೆ ಪತ್ರವೊಂದನ್ನು ಸೃಷ್ಟಿಸಿ, ಮಾಧ್ಯಮಗಳಲ್ಲಿ ಹರಿಬಿಟ್ಟರು ಎಂದು ಆರೋಪಿಸಿದರು. 

ಪತ್ರದ ಹಿಂದಿನ ಉದ್ದೇಶ ಪೂಜ್ಯ ಮಾತೆ ಯವರ ಗೌರವಕ್ಕೆ ಧಕ್ಕೆ ತರುವಂತಹದ್ದಾಗಿದೆ. ಮಾತೆ ಮಹಾದೇವಿ  ಬಸವಣ್ಣನವರ ಕುರಿತು 200 ಪುಸ್ತಕ ಬರೆದು, ಪ್ರವಚನಗಳ ಮೂಲಕ ಗುರು ಬಸವಣ್ಣನವರ ಭವ್ಯ ವ್ಯಕ್ತಿತ್ವವನ್ನು ಪ್ರಪಂಚಾದ್ಯಂತ ಸಾರಿದರು.  ಮಾತೆಯವರನ್ನರು ಅವಮಾನಿಸಿದ ರಂಭಾಪುರಿ ಶ್ರೀಗಳು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ವೀಣಾ ಮಂಜುನಾಥ, ಎಂ. ಲತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next