Advertisement
ಅಂತರಗಂಗೆ ಸೇತುವೆಗೆ ಸಿಲುಕಿ ಸೇತುವೆ ಬ್ಲಾಕ್ ಆಗಿತ್ತು ಹಾಗೂ ಹೊಳೆಯ ಮೇಲ್ಭಾಗದಲ್ಲಿ ಸುಮಾರು ಒಂದು ಫೀಟ್‌ನಷ್ಟು ತೇಲುತಿತ್ತು. ನೆರೆಯಿಂದ 300 ಎಕ್ರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯ ಸಂಭವವಿದೆ ಮತ್ತು ಸುಮಾರು 50ಎಕ್ರೆ ಭತ್ತದ ನೇಜಿ ಈಗಾಗಲೇ ಕೊಳೆತಿದೆ. ಅಂತರಗಂಗೆ ತೆರವುಗೊಳಿಸುವಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ ಭೋಜ ಪೂಜಾರಿ, ರಾಜಾರಾಮ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಹಂಡಿಕೆರೆ, ಪುಟ್ಟ ಶೆಟ್ಟಿ, ರವಿ ಗಿಳಿಯಾರು, ರಾಘು ಶೆಟ್ಟಿ, ಶರತ್, ದಿನೇಶ್ ಹರ್ತಟ್ಟು ಕೈಜೋಡಿಸಿದರು.
ಮುಂದಿನ ವರ್ಷ ಮಳೆಗಾಲಕ್ಕೆ ಮೊದಲು ಹೊಳೆಯ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಹಾಗೂ ಮೋರಿ ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಬೇಕು ಮತ್ತು ಅಂತರಗಂಗೆ ಹತೋಟಿಗೆ ಕೃಷಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಈ ಕುರಿತು ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.