Advertisement

ಕುಡಿಯುವ ನೀರು, ಮರಳು ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಿ: ಸುಕುಮಾರ ಶೆಟ್ಟಿ

11:12 PM Apr 30, 2020 | Sriram |

ಕೊಲ್ಲೂರು: ಬೈಂದೂರು ಕ್ಷೇತ್ರದಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತವು ತುರ್ತು ಕ್ರಮ ಕೈಗೊಳ್ಳಬೇಕು. ಅಧಿಕಾರಿ ಗಳ ಹಾರಿಕೆಯ ಉತ್ತರದಿಂದ ಸಮಸ್ಯೆ ಬಗೆ ಹರಿಯದು. ಇನ್ನೆರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

Advertisement

ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಎ. 29 ರಂದು ನಡೆದ ಸಂಸದ ಬಿ. ವೈ. ರಾಘವೇಂದ್ರ ಅವರ ಕೋವಿಡ್‌ 19ರ ಸಾಧಕ ಬಾಧಕಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಎಪ್ರಿಲ್‌ ಮುಗಿಯುತ್ತ ಬಂದರೂ ಜನರಿಗೆ ನೀರು ಒದಗಿಸುವಲ್ಲಿ ಇಲಾಖೆ ವಿಫ‌ಲವಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಯಾರಿಗೂ ಸೂಕ್ತವಲ್ಲ ಎಂದರು.

ಮರಳು ಸಮಸ್ಯೆ
ಮರಳಿನ ಕ್ಷಾಮ ನಿವಾರಿಸಲು ತುರ್ತು ಕ್ರಮ ಅಗತ್ಯವಿದೆ. ಗುಲ್ವಾಡಿಯಲ್ಲಿ ವೆಂಟೆಡ್‌ ಡ್ಯಾಂ ಇದ್ದು ಅಲ್ಲಿ ನಾಲ್ಕು ಸಾವಿರ ಲೋಡ್‌ ಮರಳು ಸಿಗುತ್ತದೆ. ಮರಳು ಒದಗಿಸುವಲ್ಲಿ ರಾಜಕೀಯ ಸಲ್ಲದು. ಅಂತೆಯೇ ರಸ್ತೆ ಕಾಮಗಾರಿ ಆರಂಭಗೊಳ್ಳಬೇಕು, ಜನಹಿತ ಕೆಲಸವಾಗಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದರು.

ಸಂಸದ ಬಿ. ವೈ. ರಾಘವೇಂದ್ರ ಶಾಸಕರ ಹೇಳಿಕೆ ಸಮರ್ಥಿಸಿಕೊಂಡು ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ನೀರಿನ ಸಮಸ್ಯೆ ಬಗೆಹರಿಸಬೇಕು. ಅಂತೆಯೇ ಕೋವಿಡ್‌  19 ರ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿ ಪ್ರತಿಯೋರ್ವರೂ ಮಾಸ್ಕ್ ಧರಿಸಿ ಎಚ್ಚರಿಕೆ ವಹಿಸಬೇಕೆಂದರು.

ಉಡುಪಿ ಜಿಲ್ಲೆಯು ಹಸಿರು ವಲಯವಾಗಿದ್ದು ಬೈಂದೂರು, ಕುಂದಾಪುರ ತಾಲೂಕಿನ ಗ್ರಾಮಸ್ಥರು, ಇಲಾಖಾಧಿ ಕಾರಿಗಳು ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಹಾಗೂ ಪೊಲೀಸರ ಕಟ್ಟುನಿಟ್ಟಾದ ಕ್ರಮದಿಂದ ಇದು ಯಶಸ್ವಿಯಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪಭು, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿಕುಮಾರ್‌, ಪಿಎಂ ಕಚೇರಿಯ ಪ್ರಸನ್ನ, ತಾಣ ವೈದ್ಯಾಧಿಕಾರಿಗಳಾದ ಡಾಣ ನಾಗಭೂಷಣ ಡಾ. ಪ್ರೇಮಾನಂದ, ತಹಶೀಲ್ದಾರರಾದ ತಿಪ್ಪೇಸ್ವಾಮಿ, ಬಿ. ವಿ. ಪೂಜಾರ್‌, ವಾರಾಹಿ ಯೋಜನೆಯ ಮುಖ್ಯ ಇಂಜಿನಿಯರ್‌ , ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ , ಜಿ.ಪಂ. ಸದಸ್ಯ ಬಾಬು ಹೆಗ್ಡೆ , ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್‌ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next