ನವದೆಹಲಿ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಶುರುವಾಗುತ್ತಿರುವಂತೆಯೇ ಕಾಲೇಜುಗಳಲ್ಲಿ ರ‍್ಯಾಗಿಂಗ್ ತಡೆಯಲು ಯುಜಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ನಿಟ್ಟಿನಲ್ಲಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅದು ಪತ್ರ ಬರೆದಿದೆ. ವಿವಿಗಳಲ್ಲಿ ರ‍್ಯಾಗಿಂಗ್ ವಿರೋಧಿ ಸಮಿತಿ, ಆ್ಯಂಟಿ ರ‍್ಯಾಗಿಂಗ್ ಸ್ಕ್ವಾಡ್, ಆ್ಯಂಟಿ ರ‍್ಯಾಗಿಂಗ್ ಸೆಲ್ ರಚನೆ ಮತ್ತು ಈ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ.
ಕಾಲೇಜುಗಳ ಪ್ರಾಸ್ಪೆಕ್ಟಸ್ ಮತ್ತು ಬ್ರೋಚರ್‌ಗಳಲ್ಲಿ ಆ್ಯಂಟಿ ರ‍್ಯಾಗಿಂಗ್ ಬಗ್ಗೆ ಸ್ಟಷ್ಟ ಎಚ್ಚರಿಕೆ ಪ್ರಕಟಿಸಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಆ್ಯಂಟಿ ರ‍್ಯಾಗಿಂಗ್ ಕಮಿಟಿಯ ನೊಡೆಲ್ ಆಫಿಸರ್ ಅವರ ಸಂಪೂರ್ಣ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಕಾಲೇಜುಗಳ ವೆಬ್‌ಸೈಟ್, ಮಾಹಿತಿ ಬುಕ್‌ಲೆಟ್ ಸೇರಿದಂತೆ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದು ಸೂಚಿಸಿದೆ.
ನಿಯಮ ಉಲ್ಲಂಘಿಸಿದರೆ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗದುಕೊಳ್ಳಬೇಕು ಎಚ್ಚರಿಕೆ ನೀಡಲಾಗಿದೆ.
“ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ಅವರಿಗೆ ಆಪ್ತಸಮಾಲೋಚನೆ, ಹಾಗೂ ಆ್ಯಂಟಿ ರ‍್ಯಾಗಿಂಗ್ ಕಮಿಟಿ ಸದಸ್ಯರು ಕ್ಯಾಂಟೀನ್, ಕ್ಯಾಂಪಸ್‌ನ ಬಸ್ ನಿಲ್ದಾಣ, ಹಾಸ್ಟೆಲ್‌ಗಳು ಸೇರಿದಂತೆ ಕ್ಯಾಂಪಸ್‌ನ ವಿವಿಧ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚಿಸಲಾಗಿದೆ.