Advertisement
ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಎಲ್ಲ ರಲ್ಲೂ ಇದೆ. ಆದರೂ ವಾಸ್ತವ ಮಾತ್ರ ಬೇರೆಯೇ ಇರುತ್ತದೆ ಎನ್ನುವುದಕ್ಕೆ ವಿಮಾ ಯೋಜ ನೆ ಗಳೇ ಒಳ್ಳೆಯ ಉದಾಹರಣೆ. ಏಕೆಂದರೆ, ದೀರ್ಘಾವಧಿ ಹೂಡಿಕೆಯಲ್ಲಿ ಹಣ ಹಲವು ಪಟ್ಟು ವೃದ್ಧಿಸುವುದಕ್ಕೆ ಸಾಕಷ್ಟು ಅವಕಾಶಗಳು, ಕಾಲಾವಧಿ ಇರುತ್ತವೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ವಾಸ್ತವದಲ್ಲಿ ಹಾಗೇನು ಆಗಬೇಕೆಂದೇನು ಇಲ್ಲ. ದೀರ್ಘಾವಧಿಯ ಲೆಕ್ಕಾಚಾರಗಳು ಎಷ್ಟೋ ವೇಳೆ ತಲೆಕೆಳಗಾಗುವುದಿದೆ.
Related Articles
Advertisement
ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆ, ಎಚ್ಚರಿಕೆ ಇಲ್ಲದಿರುವುದರಿಂದ ಬಹುತೇಕ ಮಂದಿ ಸುಲಭದಲ್ಲಿ ಎಂಡೋಮೆಂಟ್ ಸ್ಕೀಮ್‌ಗಳಲ್ಲಿ ಏಜಂಟರ ಕುಟಿಲತೆಯಿಂದಾಗಿ ಸಿಲುಕಿಕೊಳ್ಳುತ್ತಾರೆ. ಮನಿ ಬ್ಯಾಕ್ ಪಾಲಿಸಿಗಳು ಆಕರ್ಷಕವೆಂಬ ಭಾವನೆ, ನಂಬಿಕೆ ಜನರಲ್ಲಿರುವುದು ಸಹಜವೇ. ಆದರೆ ಮನಿ ಬ್ಯಾಕ್ ಪಾಲಿಸಿಗಳಡಿ ಜನರ ಕೈಗೆ ಕಾಲಕಾಲಕ್ಕೆ ಬರುವ ಹಣ ಹಾಗೆಯೇ ಕರಗಿ ಹೋಗಿ ಪಾಲಿಸಿ ಮೆಚೂರ್ ಆದಾಗ ದೊಡ್ಡ ಮೊತ್ತ ಕೈಗೆ ಬರುವಲ್ಲಿ ವಂಚಿತರಾಗುತ್ತಾರೆ.
ಮಕ್ಕಳ ಉಜ್ವಲ ಭವಿಷ್ಯದ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸುವ ಪ್ರಶ್ನೆ ಬಂದಾಗ ವಿಮಾ ಹೂಡಿಕೆ ಅಷ್ಟೇನೂ ಆಕರ್ಷಕವೂ ಲಾಭದಾಯಕವೂ ಅಲ್ಲ ಎಂಬುದನ್ನು ಅರಿಯದೇ ಇರುವುದರಿಂದ ಏಜೆಂಟರು ಇದರ ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದು ವಾಸ್ತವ.
ಸತೀಶ್ ಮಲ್ಯ