Advertisement

ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ: ಸಿಇಒ

03:19 PM Mar 15, 2017 | Team Udayavani |

ಕಲಬುರಗಿ: ಈಗಾಗಲೇ ಬೇಸಿಗೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸಮಸ್ಯೆ ಇರುವ 64 ಗ್ರಾಮಗಳಿಗೆ ಕುಡಿವ ನೀರಿನ ಕೊರತೆ ಆಗಬಾರದು. ಅಲ್ಲದೆ, ರಜೆಯಲ್ಲಿಯೂ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕಟ್ಟುನಿಟ್ಟಾಗಿಜಾರಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ ಸೂಚನೆ ನೀಡಿದರು. 

Advertisement

ಮಂಗಳವಾರ ಜಿಲ್ಲಾ ಪಂಚಾಯಿತಿ ಹೊಸ ಕಟ್ಟಡದಲ್ಲಿ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ.

ಜಿಪಂನಲ್ಲಿ ಹಣದ ಕೊರತೆ ಇಲ್ಲ, ಕೊರತೆ ಇರುವ ಗ್ರಾಮಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದು ಸೂಚಿಸಿದ ಅವರು, ಬೇಸಿಗೆಯಲ್ಲಿಉದ್ಭವಿಸುವ ಸಮಸ್ಯೆಗಳಿಗೆ ತಕ್ಷಣವೆ ಸ್ಪಂದಿಸುವ ರೀತಿಯಲ್ಲಿ ಅಧಿಕಾರಿಗಳು ಸಿದ್ಧರಾಗಬೇಕು. ಸಮರೋಪಾದಿಯಲ್ಲಿ ಜನರಿಗೆ ಬೇಸಿಗೆಯಲ್ಲಿ ನೀರು ಒದಗಿಸಲು ಸಿದ್ಧತೆ ಮಾಡಿಕೊಳ್ಳಿ. 

3.20 ಕೋಟಿ ರೂ.ಗಳಷ್ಟು ಹಣವಿದೆ. ಈಗಾಗಲೇ 89 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣ ಬಳಕೆ ಮಾಡಲಾಗಿದೆ. ಇನ್ನೂ 2.10 ಕೋಟಿ ರೂ. ಇದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಶಾಸಕರ ಅಧ್ಯಕ್ಷತೆಯಲ್ಲಿರುವ ಕಾರ್ಯಪಡೆ ಅಡಿಯಲ್ಲಿ  ಯೋಜನೆ ರೂಪಿಸಿ ಎಂದರು. ಬೇಸಿಗೆ ಹಾಗೂ ಬರ ಸಮಸ್ಯೆಗಳಿಗೆ ಸ್ಪಂದಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ.

ಅಧಿಕಾರಿಗಳು ಅಗತ್ಯ ಕಾಮಗಾರಿಗಳ ಕುರಿತು ಶಾಸಕರ ನೇತƒತ್ವದ ಕಾರ್ಯಪಡೆಯಿಂದ ಅನುಮೋದನೆ ಪಡೆಯಬೇಕು. ಅನುಮೋದನೆಯಾದ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ. ಇಲ್ಲವಾದಲ್ಲಿ ಅದಕ್ಕೆ ಅಧಿಧಿಕಾರಿಗಳೇ ಹೊಣೆ ಎಂದು ಪುನರುತ್ಛರಿಸಿದ ಅವರು, ಪ್ರತಿ ವಾರ ವಿಡಿಯೋ ಕಾನ್‌#ರೆನ್ಸ್‌ ಮಾಡಲಾಗುತ್ತದೆ ಎಂದರು. 

Advertisement

ಬಿಸಿಯೂಟ ನಿಲ್ಲಿಸಬೇಡಿ: ಬೇಸಿಗೆಯಲ್ಲಿ ಮಕ್ಕಳಿಗೆ ಬಿಸಿಯೂಟವನ್ನು ನಿಲ್ಲಿಸಬೇಡಿ. ಯೋಜನೆಯನ್ನು ಒಂದರಿಂದ ಎಸೆಸ್ಸೆಲ್ಸಿವರೆಗೂ ಜಾರಿಗೆ ತರಲು ಆದೇಶಿಸಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಉಪ ನಿರ್ದೇಶಕ ಶಾಂತನಗೌಡ ಪಾಟೀಲ ಮಾತನಾಡಿ, ಬೇಸಿಗೆಯ ಎರಡು ತಿಂಗಳು ರಜೆಯಲ್ಲಿ ಒಂದರಿಂದ 8ನೇ ತರಗತಿ ವರೆಗಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿಗೆ ತರಲು ಸರ್ಕಾರ ಆದೇಶ ಹೊರಡಿಸಿದೆ. 

ಆದರೆ, ಯೋಜನೆಗೆ ಇಂಡೆಂಟ್‌ ಶೇಕಡಾ 30ರಷ್ಟು ಮಾತ್ರ ಕೊಡುತ್ತಾರೆ. ಅದು ಕೇವಲ ಒಂದರಿಂದ 8ನೇ ತರಗತಿ ವರೆಗೆ ಮಾತ್ರ ಎಂದು ಸ್ಪಷ್ಟಪಡಿಸಿದರು. ಯೋಜನೆಯನ್ನು 9 ಮತ್ತು ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು.

ಇಲ್ಲವಾದಲ್ಲಿ ಅವರು ಓದು ಮರೆಯುತ್ತಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದಾಗ, ಉಪ ನಿರ್ದೇಶಕರು ಉತ್ತರಿಸಿ, ಬೇಸಿಗೆ ರಜೆಯಲ್ಲಿ ಎಲ್ಲ ಶಾಲೆಗಳಲ್ಲಿ ಮುಖ್ಯಗುರುಗಳು ಹಾಜರಿರುತ್ತಾರೆ. ದಿನನಿತ್ಯ ಯೋಜನೆ ಕುರಿತು ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಮೂಲಕ ಮಾಹಿತಿ ಒದಗಿಸುತ್ತಾರೆ ಎಂದು ತಿಳಿಸಿದರು.

ರೈತರ ನೆರವಿಗೆ ಬನ್ನಿ: ಜಿಲ್ಲೆಯಲ್ಲಿ ಜೆಸ್ಕಾಂ ರೈತರ ರವಿಗೆ ಧಾವಿಸುವಲ್ಲಿ ಹಿಂದೇಟು ಹಾಕುತ್ತಿದೆ. ಇದರಿಂದ ಅವರು ಬೆಳೆದ ಬೆಳೆ ಪ್ರತಿ ಬಾರಿಯಲ್ಲಿ ಅಪಾಯಕ್ಕೆ ಸಿಲುಕುತ್ತದೆ. ಟ್ರಾನ್ಸ್‌ಫಾರ್ಮ್ರ್‌ ಕೆಟ್ಟು ಹೋದರೆ ನಾಲ್ಕೈದು ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ಬೆಳೆಗಳ ಗತಿ ಏನು ಎಂದು ಜಿಪಂ ಕೃಷಿ ಮತ್ತು

ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದುಸಿರಸಗಿ ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಜೆಸ್ಕಾಂ ಅಧಿಕಾರಿಗಳು ಉತ್ತರಿಸಿ, ಶೀಘ್ರವೇ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಟಿಸಿ ದುರಸ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು. 

ಇದರಿಂದ ಸಮಯಕ್ಕೆ ಸರಿಯಾಗಿ ಟಿಸಿಗಳು ರೈತರಿಗೆ ಸಿಕ್ಕು ಬೆಳೆ ಹಾಳಾಗದಂತೆ ತಡೆಯಲು ಯೋಜಿಸಲಾಗಿದೆ. ಅಲ್ಲದೆ, 1912 ಟೋಲ್‌ μà ನಂಬರ್‌ಗೆ ಕರೆ ಮಾಡಿದರೆ ಕೂಡಲೇ ವ್ಯವಸ್ಥೆ ಮಾಡಲಾಗುವುದು ಎಂದರು. ಉಪಾಧ್ಯಕ್ಷೆ ಶೋಭಾ ಸಿರಸಗಿ ಅವರು, ಅಫಜಲಪುರ ತಾಲೂಕಿನಲ್ಲಿ ಗಂಗಾಕಲ್ಯಾಣದಲ್ಲಿ ಬಹಳಷ್ಟು ಕೊಳವೆಬಾವಿಗೆ ಇನ್ನೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ, ಕಾರಣ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಅಧಿಕಾರಿಗಳು ಉತ್ತರಿಸಲಿಲ್ಲ. ಆದರೆ, ಎಲ್ಲಾ 660 ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಮಾಡಲಾಗಿದೆ ಎಂದರು. ಜಿಪಂ ಅಧ್ಯಕ್ಷೆ ಸುವರ್ಣಾ ಹೆಚ್‌ಮಲಾಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ, ಸಂಜೀವನ್‌ ರಮೇಶ ಯಾಕಾಪುರ, ಯೋಜನಾಧಿಧಿಕಾರಿ ಪ್ರವಿಣಾ ಪ್ರಿಯಾ ಹಾಜರಿದ್ದರು. ಜಿಲ್ಲಾ ಮಟ್ಟದ ಅಧಿಧಿಕಾರಿಗಳು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next