Advertisement

ಅವಕಾಶ ಬಳಸಿಕೊಂಡು ಮುಖ್ಯವಾಹಿನಿಗೆ ಬನ್ನಿ; ಉಚ್ಚೆಂಗೆಪ್ಪ

06:26 PM Oct 27, 2022 | Team Udayavani |

ಹರಪನಹಳ್ಳಿ: ತಳ ಸಮುದಾಯಗಳು ಸ್ವಾಭಿಮಾನ ಮತ್ತು ಮೌಲ್ಯಯುತ ಜೀವನ ನಡೆಸುವ ಮೂಲಕ ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.

Advertisement

ತಾಲೂಕಿನ ಬೆಂಡಿಗೇರಿ ಹಾಗೂ ನಿಟ್ಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಮೀಸಲಾತಿ ನೀತಿಯನ್ನು ಪುನರ್‌ ಪರೀಶಿಲಿಸಿ ಅಸಮಾನತೆ ಇರುವವರೆಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಇತರೆ ಮೂಲಭೂತ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಇದೆ ಈ ನಿಟ್ಟಿನಲ್ಲಿ ತಳ ಸಮುದಾಯಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಮಹರ್ಷಿ ವಾಲ್ಮೀಕಿ ಅವರ ಕೃತಿ ದೇಶ, ಗಡಿ ಧರ್ಮದ ಎಲ್ಲೆ ಮೀರಿ ವಿಶ್ವವ್ಯಾಪಿಯನ್ನು ಪಡೆದಿದ್ದು, ಅದರಲ್ಲಿರುವ ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳನ್ನು ನಿತ್ಯ ನಮ್ಮ ಬದುಕಿನಲ್ಲಿ ಆಳವಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.

ನಾಯಕ ಸಮಾಜದ ಕಂಚಿಕೇರಿ ಜಯಲಕ್ಷ್ಮೀ ಮಾತನಾಡಿ, ಜಗತ್ತಿಗೆ ಮೊಟ್ಟ ಮೊದಲ ಸಂವಿಧಾನ ಕೊಟ್ಟ ಸಾಹಿತ್ಯ ಕ್ಷೇತ್ರದ ಪಿತಾಮಹ ಆದಿ ಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

Advertisement

ಬಿಜೆಪಿ ಎಸ್‌ಟಿ ಘಟಕದ ಜಿಲ್ಲಾ ಮಖಂಡ ಆರ್‌. ಲೊಕೇಶ್‌ ಮಾತನಾಡಿ, ಬಿಜೆಪಿ ಸರ್ಕಾರದ ಅವ ಧಿಯಲ್ಲಿಯೇ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಘೋಷಣೆ ಮಾಡಲಾಯಿತು. ಇದೀಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ನಮ್ಮ ಸರ್ಕಾರ ಪರಿಶಿಷ್ಟ ಜಾತಿಗೆ 15ರಿಂದ 17, ಪರಿಶಿಷ್ಟ ಪಂಗಡಕ್ಕೆ 3ರಿಂದ 7 ರಷ್ಟು ಮೀಸಲಾತಿ ನೀಡುವ ಮೂಲಕ ಬಿಜೆಪಿ ಎಸ್ಸಿ-ಎಸ್ಟಿ ಜನಾಂಗದ ಪರವಾಗಿದೆ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ ಎಂದರು.

ಮುಖಂಡರಾದ ಮಾದಾಪುರ ಶಿವಾನಂದ, ಗುಂಡಿ ಮಂಜುನಾಥ, ಜೋಗಿ ಬಸವರಾಜ, ಬೆಂಡಿಗೇರಿಯ ಜೆ. ನಾಗರಾಜಪ್ಪ, ಜೆ. ಹೇಮಣ್ಣ, ಕೆ.ಮಹೇಶಪ್ಪ, ಪಿ. ವೆಂಕಟೇಶ, ಜೆ. ಶಶಿ., ಬಿ. ರಾಜಪ್ಪ, ಬಿ. ಕರಡಿ ಮಂಜುನಾಥ. ಬಿ.ಎನ್‌. ಮಾರುತಿ, ರಾಜ, ಬಡಿವಾರದ ನಾಗರಾಜ, ಕರಡಿ ದೊಡ್ಡ ಮಂಜುನಾಥ, ಬಡಿವಾರದ ಕೊಟ್ರೇಶ, ಬಿ. ಸುರೇಶ್‌, ಎಚ್‌.ಟಿ. ಹನುಮಂತಪ್ಪ, ಎಚ್‌.ಟಿ. ಅಶೋಕಪ್ಪ, ಮೂಲಿಮನಿ ಸೋಮಲಿಂಗಪ್ಪ, ಮೂಲಿಮನಿ ಹನುಮಂತಪ್ಪ, ಎಚ್‌.ಟಿ. ಯೊಗೇಶಪ್ಪ, ನವೀನ್‌, ಭೀಮಪ್ಪ, ಗಜೇಂದ್ರ. ಎಚ್‌ .ಟಿ. ಹನುಮಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next