ಮುದಗಲ್ಲ: ಲಿಂಗಸುಗೂರ ತಾಲೂಕಿನಲ್ಲಿ ಏ.30ರಂದು ನಡೆಯಲಿರುವ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮದ ಲಾಭವನ್ನು ಬಡರೋಗಿಗಳು ಪಡೆಯಬೇಕು ಎಂದು ಮುದಗಲ್ಲ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ಹೇಳಿದರು.
ಪುರಸಭೆ ಆವರಣದಲ್ಲಿ ಜಿಪಂ ರಾಯಚೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಲಿಂಗಸುಗೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ಮಾಸಾಚರಣೆ ಜಾಥಾದಲ್ಲಿ ಅವರು ಮಾತನಾಡಿದರು.
ಬಡವರು, ಆರ್ಥಿಕ ತೊಂದರೆಯಲ್ಲಿರುವರು ಆರೋಗ್ಯ ಮೇಳೆದಲ್ಲಿ ಭಾಗವಹಿಸಿ ತಜ್ಞ ವೈದ್ಯರು ನೀಡುವ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ, ಸಲಹೆ, ಕೀಲುನೋವು, ಸಂಧಿವಾತ, ವಿವಿಧ ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆ, ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು, ವೃದ್ಧರ ಆರೈಕೆ ಸೇರಿದಂತೆ ಇನ್ನು ಅನೇಕ ಚಿಕಿತ್ಸೆ ಮತ್ತು ಸಲಹೆ ಜೊತೆಗೆ ಆರೋಗ್ಯ ಕಾರ್ಡ್ ಮತ್ತು ಇತರೆ ಇಲಾಖೆ ಮಾಹಿತಿ ನೀಡಲಿದ್ದಾರೆ ಎಂದರು.
ಮಲೇರಿಯಾ ಮಾಸಾಚರಣೆ ಜಾಥಾಕ್ಕೆ ಪುರಸಭೆ ಉಪಾಧ್ಯಕ್ಷ ಶೀವಗ್ಯಾನಪ್ಪ ಬಡಕುರಿ ಚಾಲನೆ ನೀಡಿದರು. ಮಳೆಗಾಲದಲ್ಲಿ ಮಲೇರಿಯಾ ಹಾವಳಿ ಹೆಚ್ಚುತ್ತದೆ. ಅದಕ್ಕೆ ಅಗತ್ಯ ಕ್ರಮಗಳನ್ನು ಅನುಸರಿಸುವ ಮಾರ್ಗೋಪಾಯಗಳ ಬಗ್ಗೆ ಜಾಥಾದಲ್ಲಿ ವಿವರಿಸಲಾಯಿತು.
ಜಾಥಾದಲ್ಲಿ ಪುರಸಭೆ ಉಪಾಧ್ಯಕ್ಷರು ಶಿವಗ್ಯಾನಪ್ಪ ಬಡುಕುರಿ, ಪುರಸಭೆ ಸದಸ್ಯ ದುರ್ಗಪ್ಪ ಕಟ್ಟಿಮನಿ, ಮುಖಂಡರಾದ ಸೈಯದ್ ಸಾಬ್, ಮಹೆಬೂಬ್ ಬಾರಿಗಿಡ, ಆಗೋಗ್ಯ ಮಿತ್ರ ಬಸವರಾಜ ಗಸ್ತಿ, ಆಪ್ತ ಸಮಾಲೋಚಕಿ ದೀಪಾ, ಪುರಸಭೆ ಸಿಬ್ಬಂದಿಗಳಾದ ನಿಸಾರ್ ಅಹ್ಮದ್, ಚನಮ್ಮ, ಬಸವರಾಜ, ಆಶಾ ಕಾರ್ಯಕರ್ತೆ ದೇವಮ್ಮ, ಪ್ರಮೀಳಾ, ಶೈಲಜಾ, ಸಲಿಂಮಾ, ಮೌನಬೀ ಅರುಣಾ, ಇಂದ್ರಾ ಬಾಯಿ ಇದ್ದರು.