ಕೂಡ್ಲಿಗಿ: ಸರ್ಕಾರ ರೈತರ ನೆರವಿಗೆ ಇದ್ದು, ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು.
ಪ್ರವಾಸಿಮಂದಿರದ ಆವರಣದಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಕೃಷಿ ಅಭಿಯಾನ ಯೋಜನೆಯಡಿ ಏರ್ಪಡಿಸಿದ್ದ ಮಾಹಿತಿ ರಥಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
2021-22ನೇ ಸಾಲಿನ ಯಾಂತ್ರಿಕರಣ ಯೋಜನೆಯಡಿ ಗ್ರಾಮಗಳಲ್ಲಿ ಫಾರ್ಮ್ ಮಿಷನರಿ ಬ್ಯಾಂಕ್ ಘಟಕದಡಿ 8 ಲಕ್ಷ ರೂಗಳ ಸರಕಾರಿ ಸಹಾಯಧನದಿಂದ ಒಂದು ಟ್ಯಾಕ್ಟರ್ ಮತ್ತು 6 ಕೃಷಿ ಯಂತ್ರೋಪಕರಣಗಳನ್ನು ತಾಲೂಕಿನ ಶಿವಪುರ ಕ್ಲಸ್ಟರ್‌ನ ಶಿವಪುರ ರೈತ ಉತ್ಪಾದಕ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ಕಂಪನಿಗೆ ವಿತರಿಸಿದರು.
ಬಿತ್ತನೆ ಬೀಜ ಹಾಗೂ ಚೆಕ್ ವಿತರಣೆ: ಮುಂಗಾರು ಹಂಗಾಮಿನ ನಾನಾ ಬೀಜಗಳನ್ನು ರೈತರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು. ನಂತರ ಕೃಷಿ ಇಲಾಖೆಯ ಸಹಾಯ ಸಹಕಾರ ಹಾಗೂ ಮಾಹಿತಿ ಇತ್ಯಾದಿ ವಿಷಯಗಳಿರುವ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಕೃಷಿ ಅಭಿಯಾನ ವಾಹನಕ್ಕೆ ಶಾಸಕರು ಭಾನುವಾರ ಚಾಲನೆ ನೀಡಿದರು.
ಕರಪತ್ರಗಳನ್ನು ಬಿಡುಗಡೆ ಮಾಡಿದರು. ನಂತರ ಬಣವಿಕಲ್ಲು ಗ್ರಾಮದ ಬಿ.ಎಸ್. ಮರುಳಸಿದ್ದಪ್ಪ ಇವರು ಹಾವು ಕಚ್ಚಿ ಮೃತರಾಗಿದ್ದಕ್ಕೆ 2 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು. ಸಹಾಯಕ ಕೃಷಿ ನಿರ್ದೇಶಕ ಕೆ. ವಾಮದೇವಕೊಳ್ಳಿ, ತಾಪಂ ಇಒ ವೈ. ರವಿಕುಮಾರ್, ತಾಂತ್ರಿಕ ವ್ಯವಸ್ಥಾಪಕ ಶ್ರವಣಕುಮಾರ್, ಪ್ರಭಾರಿ ಕೃಷಿ ಅಧಿಕಾರಿ ಸಾವಿತ್ರಿ ಹರಾಳ್, ಗುಂಡುಮುಣುಗು ತಿಪ್ಪೇಸ್ವಾಮಿ, ರೈತ ಮುಖಂಡ ಎಂ.ಬಸವರಾಜ, ಬಣವಿಕಲ್ಲು ಎರಿಸ್ವಾಮಿ, ಹುರುಳಿಹಾಳ್ ರೇವಣ್ಣ ಇದ್ದರು.