ಚಾಮರಾಜನಗರ: ಜಿಲ್ಲೆಯನ್ನು ಇನ್ನು 6 ತಿಂಗಳೊಳಗೆ ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಲು ಅಗತ್ಯವಿರುವ ಕಾರ್ಯಯೋಜನೆ ರೂಪಿಸಿ ಇದರ ಅನುಷ್ಠಾನಕ್ಕೆ ಕಾರ್ಯೋನ್ಮುಖ ರಾಗುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ಬಾಲ ಕಾರ್ಮಿಕರಿದ್ದಾರೆ? ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂದು ಪತ್ತೆಹಚ್ಚಬೇಕು, ಅಗತ್ಯ ಪೂರ್ವ ಸಿದ್ಧತೆಯೊಂದಿಗೆ ಸಮೀಕ್ಷೆ ನಡೆಸಬೇಕು. ಕಾರ್ಯಕ್ಷಮತೆಹೆಚ್ಚಿಸಲುನೆರವಾಗುವಮೊಬೈಲ್ ಆ್ಯಪ್, ಸಾಫ್ಟ್ವೇರ್ ಅನ್ನು ಅಭಿವೃದ್ಧಿಗೊಳಿಸಿ ಕೊಳ್ಳಬೇಕು. ನಿಗದಿತ ನಮೂನೆಯನ್ನು ಸಿದ್ಧಪಡಿಸಿ ಕೊಳ್ಳಬೇಕು. ಇತರೆ ಇಲಾಖೆಗಳ ನೆರವು ಪಡೆದು ಸಮೀಕ್ಷೆ ಪೂರ್ಣಗೊಳಿಸಬೇಕೆಂದರು.
ಸಮೀಕ್ಷೆಗೆ ಮೊದಲು ಸಾಕಷ್ಟು ಜಾಗೃತಿ ಕಾರ್ಯ ಕ್ರಮಗಳನ್ನುನಡೆಸಬೇಕಿದೆ,ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕಿದೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾತ್ರವಲ್ಲ ಇತರೆ ಸಂಬಂಧಪಟ್ಟ ಇಲಾಖೆಗಳುಜೊತೆಗೂಡಿಜಂಟಿಕಾರ್ಯಾಚರಣೆ ನಡೆಸಿ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಬೇಕಿದೆ. ಈ ಎಲ್ಲವೂ ಯಶಸ್ವಿ ಯಾಗಲು ಕಾರ್ಯಬದ್ಧ ಯೋಜನೆ ತಯಾರಿ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಯೋಜನಾ ಬದ್ಧವಾಗಿ ಸಮೀಕ್ಷೆ ಕೈಗೊಳ್ಳಲು ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಬೇಕು, ಆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲೂ ಸಮೀಕ್ಷೆ ನಡೆಸಿ ಬಾಲ ಕಾರ್ಮಿಕ ಮುಕ್ತವೆಂದು ಘೋಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಗುರಿ ನಿಗದಿ ಪಡಿಸಿಕೊಂಡು ಕಾಲಮಿತಿಯೊಳಗೆ ಸಮೀಕ್ಷೆ ಕೈಗೊಳ್ಳಬೇಕು. ಈ ಬಗ್ಗೆ ಪ್ರಗತಿ ಪರಿಶೀಲನೆಯಾಗಬೇಕು ಎಂದರು.
ಫಲಕ ಪ್ರದರ್ಶಿಸಿ: ಬಾಲ ಕಾರ್ಮಿಕರ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮಕ್ಕಳ ನೆರವಿಗಾಗಿ ಸಹಾಯವಾಣಿ ಸಂಖ್ಯೆ 1098 ಲಭ್ಯವಿದೆ. ಇದರ ಸದುಪಯೋಗಕ್ಕಾಗಿ ವ್ಯಾಪಕ ಪ್ರಚಾರ ಮಾಡಬೇಕಿದೆ. ಎಲ್ಲಾ ಸರ್ಕಾರಿ ವಾಹನ, ಪೊಲೀಸ್ ಠಾಣೆ, ರೈಲು, ಬಸ್ ನಿಲ್ದಾಣ, ಆಸ ³ತ್ರೆ, ಶಾಲೆ, ಮಾರುಕಟ್ಟೆ, ಹೋಟೆಲ್, ಅಂಗಡಿ ಮುಂಭಾಗ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯ ನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸ ಬೇಕು. ರೆಡಿಯೋ ಮೂಲಕವೂ ತಲುಪುವ ಹಾಗೆ ವ್ಯವಸ್ಥೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಅಧಿಕಾರಿ ಮಹೇಶ್, ಡಿವೈಎಸ್‌ಪಿ ಅನ್ಸರ್ ಅಲಿ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.