ತುಮಕೂರು: ಜಿಲ್ಲೆಯಲ್ಲಿ ಸುಡು ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕುಡಿವ ನೀರಿಗೆ ಸಮಸ್ಯೆ ಯಾಗದಂತೆ ಕ್ರಮ ವಹಿಸಿ ಎಂದು ಜಿಪಂ ಸಿಇಒ ಶುಭ ಕಲ್ಯಾಣ್‌ಗೆ ಕರ್ನಾಟಕ ಕೌಶಲ್ಯಾಭಿವೃದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದರು. ನಗರದ ಜಿಪಂನಲ್ಲಿ ಮಂಗಳವಾರ ಸಿಇಒಗೆ ಮನವಿ ಸಲ್ಲಿಸಿ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿದ ಅವರು, ಜಿಲ್ಲೆಯ ಯಾವ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಇದೆ ಎಂಬುದನ್ನು ಪಿಡಿಒಗಳ ಮುಖಾಂತರ ವರದಿ ತರಿಸಿಕೊಂಡು ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೋರೆÌಲ್ ಕೊರೆಸಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟ್ಯಾಂಕರ್ ಮೂಲಕ ನೀರು: ಕೊಳವೆ ಬಾವಿ ವಿಫಲವಾದರೆ ಟ್ಯಾಂಕರ್ ಮೂಲಕ ವಾದರೂ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳ ಬೇಕು. ರೈತರು ತಮ್ಮ ತೋಟ ಗಳಿಗೆ ಪಂಪು ಮೋಟಾರ್ ಅಳವಡಿಸಲು ವಿದ್ಯುತ್ ಸಮಸ್ಯೆ ಎದುರಾಗಬಹುದಾಗಿದ್ದು, ಕೂಡಲೇ ಅಂತಹ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಸಬ್ಸಿಡಿ ಹೆಚ್ಚಿಸಿ: ರೈತರಿಗೆ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು, ಪೂರ್ವ ಮುಂಗಾರಿನಲ್ಲಿ ರೈತರು ಬೆಳೆ ಬೆಳೆಯುವುದಕ್ಕೆ ಸಹಕಾರ ಮಾಡಬೇಕು, ರೈತರು ತಮ್ಮ ಕೆಲಸವನ್ನು ಸುಗಮಗೊಳಿಸಲು ಮೂರು ನಾಲ್ಕು ಮಂದಿ ತೆರಳುತ್ತಾರೆ ಅಂತಹ ವಾಹನಗಳನ್ನು ತಡೆಯದಂತೆ ನೋಡ ಬೇಕು ಎಂದು ತಿಳಿಸಿದರು.
ನರೇಗಾ ಕಾಮಗಾರಿ ಚುರುಕುಗೊಳಿಸಿ: ಡಿ.ಆರ್.ಡಿ.ಎ. ಶಾಖೆಯು ನಿರ್ವಹಿಸುವ ವಿವಿಧ ವಸತಿ ಯೋಜನೆಗಳಾದ ಆಶ್ರಯ, ಡಾ.ಅಂಬೇಡ್ಕರ್, ಇಂದಿರಾ ಆವಾಸ್ ಯೋಜನೆ, ಬಸವ ವಸತಿ ಯೋಜನೆಗಳ ಅನುಷ್ಠಾನ. ಆಶ್ರಯ ನಿವೇಶನ ಯೋಜ ನೆಯ ಅನುಷ್ಠಾನ. ವಸತಿ ಯೋಜನೆಗಳಡಿ ಬರುವ ದೂರುಗಳ ಪರಿಶೀಲನೆ ಹಾಗೂ ಕ್ರಮ. ಎಸ್.ಜಿ.ಎಸ್.ವೈ. ಸುವರ್ಣ ಗ್ರಾಮೋ ದಯ ಯೋಜನೆ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಬೇಕು ಎಂದು ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಿಇಒ ಶುಭ ಕಲ್ಯಾಣ್, ನರೇಗಾ ಕಾಮಗಾರಿಗಳ ಮಾನವ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲಾಗಿದೆ. ಪ್ರತಿದಿನ 275 ರೂ. ನಂತೆ ಕೂಲಿಕಾರ್ಮಿಕನಿಗೆ ಹಣ ಸಂದಾಯವಾಗಲಿದೆ. ಸಮುದಾಯ ಕೆಲಸ, ರೈತರು ಬದು ನಿರ್ಮಾಣ, ಈಗಾಗಲೇ ಎಲ್ಲಾ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದು, ವೈಯಕ್ತಿಕ ಕಾಮಗಾರಿ ಗಳಿರಬಹುದು ಅಥವಾ ಸಮುದಾಯ ಕಾಮಗಾರಿಗಳಿರಬಹುದು ತಕ್ಷಣ ಕೈಗೆತ್ತಿ ಕೊಳ್ಳುವಂತೆ ಸೂಚನೆ ನೀಡಲಾಗಿದ್ದು,
ಈ ವರ್ಷಕ್ಕೆ 1 ಕೋಟಿ ರೂ ಕ್ರಿಯಾಯೋಜನೆ ಸಿದಪಡಿಸಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಜಿಪಂ ಸದಸ್ಯ ಕೆಂಚಮಾರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರಾದ ರೇವಣ ಸಿದಪ್ಪ, ಮರಿ ಚನ್ನಮ್ಮ, ಮಂಜುನಾಥ್, ಟಿ.ಎಸ್. ತರುಣೇಶ್, ವಾಲೆಚಂದ್ರಯ್ಯ ಇದ್ದರು.
ಕಾರ್ಮಿಕರಿಗೆ ನೆರವಾಗಿ: ಮೇ 17ರ ತನಕ ಲಾಕ್‌ಡೌನ್ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೆಲವು ಭಾಗ ಗಳಲ್ಲಿ ನರೇಗಾ ಕಾಮಗಾರಿಗಳ ಆರಂಭಕ್ಕೆ ಸರ್ಕಾರವೇ ಸೂಚಿಸಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಕೆಲಸವಿಲ್ಲದೇ, ಕೈಯಲ್ಲಿ ಬಿಡಿ ಗಾಸೂ ಇಲ್ಲದೆ ಪರಿತಪಿಸುತ್ತಿರುವ ಕೂಲಿ ಕಾರ್ಮಿಕರ ನೆರವಿಗೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಒತ್ತಾಯಿಸಿದರು.