Advertisement

ಮಿಮ್ಸ್‌ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಿ

03:35 PM Apr 30, 2020 | mahesh |

ಮಂಡ್ಯ: ಮಿಮ್ಸ್‌ ಆಸ್ಪತ್ರೆಯಲ್ಲಿ ಭದ್ರತೆ, ಆಡಳಿತ, ಸ್ವಚ್ಛತೆ ಸರಿಯಾಗಿಲ್ಲ. ಸ್ಟಾಫ್ ನರ್ಸ್‌ಗಳಿಗೆ ಸರಿಯಾದ ಸೌಲಭ್ಯಗಳ ನ್ನು ಕೊಡುತ್ತಿಲ್ಲ. ಜನಪ್ರತಿನಿಧಿಗಳೊಂದಿಗೆ ನಿರ್ದೇಶಕರು ಸಹಕರಿಸುತ್ತಿಲ್ಲ. ಹಾಗಾಗಿ ಮಿಮ್ಸ್‌ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ಗೆ ಮನವಿ ಸಲ್ಲಿಸಿದರು.

Advertisement

ಮಂಡ್ಯದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಕೋವಿಡ್‌ ನಿಯಂತ್ರಣ ಕುರಿತ ಸಭೆ ಯಲ್ಲಿ ಮಾತನಾಡಿ, ನಾನೇ ಆಸ್ಪತ್ರೆಗೆ ಹೋದರೂ ನಿರ್ದೇಶಕರ ಭೇಟಿ ಸಾಧ್ಯವಾಗುತ್ತಿಲ್ಲ. ಒಮ್ಮೆ ನಿರ್ದೇಶಕರ ಕಚೇರಿಗೆ ಹೋದ ಸಮಯದಲ್ಲಿ 4 ಗಂಟೆ ಕಾದು ಕುಳಿತಿದ್ದೇನೆ. ಊಟಕ್ಕೆಂದು ಹೋದವರು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಮತ್ತೂಂದು ದಿನ ಹೋದ ಸಮಯದಲ್ಲೂ ನಿರ್ದೇಶಕರ ಭೇಟಿ ಸಾಧ್ಯವಾಗಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್‌ ಸೋಂಕಿತರನ್ನು ಆರೈಕೆ ಮಾಡುತ್ತಿರುವ ಸ್ಟಾಫ್ ನರ್ಸ್‌ಗಳಿಗೆ ಪಿಪಿ ಕಿಟ್‌ಗಳನ್ನು ಕೊಟ್ಟಿಲ್ಲ. ಅವರೆಲ್ಲರೂ ನನಗೆ ಫೋನ್‌ ಮಾಡಿ ಅಳಲು ವ್ಯಕ್ತಪಡಿಸಿದರು. ಆ ಸಮಯದಲ್ಲಿ ಪ್ರಧಾನಿಯವರಿಗೇ ಇ-ಮೇಲ್‌ ದೂರು ನೀಡುವಂತೆ ಸೂಚಿಸಿದೆ. ಅದರಂತೆ ಅವರು ದೂರು ನೀಡಿದ್ದರು. ಈಗ ಅಪಾಲಜಿ ಬರೆದುಕೊಡುವಂತೆ ಅವರಿಗೆ ಒತ್ತಾಯಿಸುತ್ತಿದ್ದಾರೆ. ಇದು ಸರಿಯಲ್ಲ.

ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮೂಲ ಸೌಲಭ್ಯಗಳನ್ನು ಕೊಟ್ಟಿಲ್ಲ. ಅವರಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ನೀಡುವಂತೆ ಮನವಿ ಮಾಡಿದರು. ಶಾಸಕ ಸುರೇಶ್‌ಗೌಡ ಮಾತನಾಡಿ, ತಾಲೂಕಿನ ಸಾತೇನಹಳ್ಳಿ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಆತ ನನ್ನ ಸ್ನೇಹಿತನೂ ಆಗಿದ್ದಾನೆ. ಎಲ್ಲ ಗ್ರಾಮಗಳಲ್ಲೂ ಹೊರಗಿನಿಂದ ಬಂದ ಜನರು ತುಂಬಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹಾಗಾಗಿ ಕೂಡಲೇ ಎಲ್ಲ ಗ್ರಾಮದವರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸುವಂತೆ ಮನವಿ ಮಾಡಿದರು. ವಿಧಾನಪರಿಷತ್‌ ಸದಸ್ಯ ಕೆ. ಟಿ.ಶ್ರೀಕಂಠೇಗೌಡ ಮಾತನಾಡಿ, ನಗರದೊಳಗೆ ಹೋಂ, ಹಾಸ್ಟೆಲ್‌ ಕ್ವಾರಂಟೈನ್‌ನಲ್ಲಿರುವವರನ್ನು ನಗರದ ಹೊರವಲಯಕ್ಕೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next