Advertisement

ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಡುಗೆ

06:50 AM Jul 03, 2018 | Team Udayavani |

ಶಿಕಾರಿಪುರ: ಯಾವುದೇ ಕಚೇರಿ, ಸರ್ಕಾರಿ ಕೆಲಸದಿಂದ ನಿವೃತ್ತರಾದಾಗ ಶಾಲು ಹೊದಿಸಿ,ಫ‌ಲಪುಷ್ಪ ನೀಡಿ ಶುಭ ಹಾರೈಸುವುದು ವಾಡಿಕೆ. ಆದರೆ, ನಿವೃತ್ತಿಗೊಂಡ ಡಿ ಗ್ರೂಪ್‌ ನೌಕರರೊಬ್ಬರನ್ನು ತೆರೆದ ವಾಹನದಲ್ಲಿ ಅವರ ಮನೆಯವರೆಗೂ ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಗಿದೆ!

Advertisement

ಇಂಥ ಅಪರೂಪದ ಹಾಗೂ ಅನುಕರಣೀಯ ಘಟನೆ ನಡೆದದ್ದು ಶಿಕಾರಿಪುರ ಪಟ್ಟಣದ ಸರ್ಕಾರಿ ಜ್ಯೂನಿಯರ್‌ ಪದವಿ ಪೂರ್ವ ಕಾಲೇಜಿನಲ್ಲಿ. ಡಿ ಗ್ರೂಪ್‌ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಂಜುನಾಥ ಅವರನ್ನು ಕಾಲೇಜಿನ ಸಿಬ್ಬಂದಿ ಸೋಮವಾರ ಮುಡಬ ಸಿದ್ದಾಪುರ ಗ್ರಾಮದ ಅವರ ಮನೆಯವರೆಗೂ ಅದ್ದೂರಿಯಾಗಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಬೀಳ್ಕೊಟ್ಟರು.

ಕಾಲೇಜಿನ ವಿದ್ಯಾರ್ಥಿಗಳು ವಾದ್ಯಗಳೊಂದಿಗೆ ಮುಂದೆ ಸಾಗುತ್ತಿದ್ದರೆ ತೆರೆದ ವಾಹನದಲ್ಲಿ ಪ್ರಾಂಶುಪಾಲರು ಹಾಗೂ ಹಿರಿಯ ಅಧಿಕಾರಿಗಳು ಜತೆಗೆ ನಿಂತು ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ದಾರಿಯಲ್ಲಿ ಸಾಗುವಾಗ ಸುತ್ತಲಿನ ಗ್ರಾಮಸ್ಥರು ಈ ಅಪರೂಪದ ಬೀಳ್ಕೊಡುಗೆ ಕಂಡು ಸಂತಸದ ನಗೆ ಬೀರುತ್ತಿದ್ದರೆ, ಮಂಜುನಾಥ ಅವರ ಕಣ್ಣಲ್ಲಿ ಆನಂದ ಭಾಷ್ಪ ಜಿನುಗುತ್ತಿತ್ತು.

ಈ ವೇಳೆ ಮಾತನಾಡಿದ ಮಂಜುನಾಥ್‌, ಸರ್ಕಾರಿ ನೌಕರರು ಸಮಾಜ ಸೇವೆಗೆ ಸಿದಟಛಿವಿರಬೇಕು. ಇಂತಹ
ಸೇವೆ ನಾವು ಹುಡುಕಿಕೊಂಡು ಹೋದರೂ ನಮಗೆ ಸಿಗುವುದಿಲ್ಲ. ಇಂದು ನೀವು ನನಗೆ ಮಾಡುತ್ತಿರುವ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದು ಭಾವುಕರಾದರು. ನನ್ನ ವೃತ್ತಿ ಜೀವನದಲ್ಲಿ ಮನಸ್ಸು ತೃಪ್ತಿಯಾಗುವಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಕೇವಲ ಡಿ ಗ್ರೂಪ್‌ ನೌಕರನಾದ ನನಗೆ ಇಷ್ಟೊಂದು ಅದ್ದೂರಿಯಾಗಿ ಬೀಳ್ಕೊಡುತ್ತಿರುವುದು ಇದೇ ಮೊದಲು. ನನಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭೇದಭಾವವಿಲ್ಲದೆ ಒಬ್ಬ ಅಧಿಕಾರಿಯಂತೆ ನಡೆಸಿಕೊಂಡಿದ್ದು, ನನ್ನ ಕೆಲಸ, ಶ್ರದೆಟಛಿ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೀಳ್ಕೊಡುತ್ತಿರುವುದು ಸಂತೋಷವಾಗಿದೆ ಎಂದು ನೌಕರರ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಾಂಶುಪಾಲ ಬಸವರಾಜ ಮುದೇನೂರು ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಸತ್ಯ. ಈ ನಿಟ್ಟಿನಲ್ಲಿ ಮಂಜುನಾಥ್‌ ಅವರು ಮಾಡಿದ ಪ್ರಾಮಾಣಿಕ ಸೇವೆಗೆ ಇಂದು ಅವರ ಆತ್ಮತೃಪ್ತಿಯಾಗುವಷ್ಟು ನಮ್ಮ ಕಡೆಯಿಂದ ಈ ಬೀಳ್ಕೊಡುಗೆ ಸಿಗುತ್ತಿದೆ. ಮುಂದಿನ ಸರ್ಕಾರಿ ನೌಕರರಿಗೆ ಅವರು ಉತ್ತಮ ಮಾರ್ಗದರ್ಶಕರಾಗಿ ನಿವೃತ್ತಿ ಹೊಂದುತ್ತಿರುವುದು ನಮಗೆ ಸಂತೋಷವಾಗಿದೆ.

Advertisement

ಸರ್ಕಾರಿ ಸೇವೆಗೆ ನಿವೃತ್ತರಾಗುತ್ತಿದ್ದಾರೆ. ಆದರೆ ನಮ್ಮ ಮನಸ್ಸಿನಲ್ಲಿ ಯಾವತ್ತೂ ನಿವೃತ್ತರಾಗುವುದಿಲ್ಲ. ಇಂದು ನಿವೃತ್ತಿಗೊಂಡ ಮಂಜುನಾಥ್‌ ಅವರಿಗೆ ನಮ್ಮ ಕಾಲೇಜಿನ ವತಿಯಿಂದ ತೆರೆದ ವಾಹನದಲ್ಲಿ ಅವರ ಮನೆಯವರೆಗೆ ವಿದ್ಯಾರ್ಥಿಗಳ ವಾದ್ಯ ವೃಂದದೊಂದಿಗೆ ಶಿಕ್ಷಕರು ಬೀಳ್ಕೊಡುತ್ತಿರುವುದು ರಾಜ್ಯದಲ್ಲೇ ಇದೇ ಮೊದಲು ಎಂದರು. ಉಪ ಪ್ರಾಂಶುಪಾಲ ಮಾಲತೇಶ್ವರ ಸೇರಿ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next