Advertisement
ಕೋಟ ಮಣೂರು-ಪಡುಕರೆ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು. ಕೋವಿಡ್ ಪರಿಣಾಮದಿಂದಾಗಿ ಪಠ್ಯ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಹೀಗಾಗಿ ಪಿಯುಸಿ, ಪದವಿ ತರಗತಿಗಳಿಗೆ ದಸರಾ ರಜೆಯನ್ನು ನೀಡಬಾರದು ಎನ್ನುವುದು ಶಿಕ್ಷಣ ಇಲಾಖೆಯ ಬಯಕೆಯಾಗಿತ್ತು.
Related Articles
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಪದವಿ ಹಂತದಲ್ಲಿ ಜಾರಿಗೆ ತರಲಾಗಿದೆ. ಇದನ್ನು ಪಿಯುಸಿ ಮತ್ತು ಪ್ರೌಢಶಾಲೆ ಮುಂತಾದ ಕೆಳಹಂತದ ವಿಭಾಗಗಳಿಗೂ ವಿಸ್ತರಿಸುವ ಉದ್ದೇಶವಿದೆ. ಈ ಬಗ್ಗೆ ಟಾಸ್ಕ್ ಪೋರ್ಸ್‌ಗಳನ್ನು ರಚಿಸಲಾಗಿದ್ದು, ಅವು ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿ ಸರಕಾರಕ್ಕೆ ನೀಡಲಿವೆ. ಅನಂತರ ಕೆಳಹಂತಕ್ಕೂ ಇದನ್ನು ವಿಸ್ತರಿಸಲಾಗುತ್ತದೆ ಎಂದರು.
Advertisement
ದಸರಾ ಬಳಿಕ 1ನೇ ತರಗತಿ ಆರಂಭದಸರಾ ಅನಂತರ 1ನೆಯಿಂದ ಎಲ್ಲರಿಗೂ ಭೌತಿಕ ತರಗತಿಗಳನ್ನು ಆರಂಭಿಸುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಬಿಸಿಯೂಟವನ್ನೂ ಆರಂಭಿಸ ಲಾಗುವುದು ಎಂದರು.