Advertisement

ಗಂಡು ಮೆಟ್ಟಿದ ನಾಡಲ್ಲಿ ತಾಜ್‌ಮಹಲ್‌-2

04:27 PM Aug 20, 2022 | Team Udayavani |

ದೇವರಾಜ ಕುಮಾರ್‌ ನಾಯಕನಾಗಿ ಅಭಿನಯಿಸಿ, ನಿರ್ದೇಶಿರುವ “ತಾಜ್‌ಮಹಲ್‌-2′ ಚಿತ್ರ, ಇದೇ ಸೆ. 2ರಂದು ತೆರೆಗೆ ಬರುತ್ತಿದೆ. ಈಗಾಗಲೇ “ತಾಜ್‌ಮಹಲ್‌-2′ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆಯ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೀಗ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ “ತಾಜ್‌ಮಹಲ್‌-2′ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆಸಲು ಯೋಜನೆ ಹಾಕಿಕೊಂಡಿದೆ.

Advertisement

ಆ. 21ರಂದು ಹುಬ್ಬಳ್ಳಿಯ ಬೆಂಗೇರಿ ಮುಖ್ಯರಸ್ತೆಯಲ್ಲಿರುವ ಸ್ಮಾರ್ಟ್‌ ಸಿಟಿ ಸೆಂಟ್ರಲ್‌ ಮಾರ್ಕೆಟ್‌ ನಲ್ಲಿ ನಡೆಯಲಿರುವ “ತಾಜ್‌ಮಹಲ್‌-2′ ಸಿನಿಮಾದ ಅದ್ಧೂರಿ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಜವಳಿ ಖಾತೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ರಾಜಕೀಯ, ಸಿನಿಮಾ ರಂಗದ ಅನೇಕ ಗಣ್ಯರು ಹಾಗೂ ಸಿನಿಪ್ರಿಯರು ಭಾಗಿಯಾಗಲಿದ್ದಾರೆ. ಸಂಜೆ 6 ಗಂಟೆಗೆ ಆರಂಭವಾಗಲಿರುವ “ತಾಜ್‌ಮಹಲ್‌-2′ ಸಿನಿಮಾದ ವರ್ಣರಂಜಿತ ಪ್ರಿ-ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ, ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದು, ಜೊತೆಗೆ ಅನೇಕ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿವೆ.

ಇನ್ನು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ “ತಾಜ್‌ ಮಹಲ್‌-2′ ಸಿನಿಮಾದ ಪ್ರಚಾರ ಕಾರ್ಯಗಳ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ದೇವರಾಜಕುಮಾರ್‌, “ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿದ್ದಾರೆ. ಹೊಸ ಕಲಾವಿದರನ್ನು ಮತ್ತು ಹೊಸಥರದ ಸಿನಿಮಾಗಳನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ಉತ್ತರ ಕರ್ನಾಟಕದ ಮಂದಿ ಯಾವಾಗಲೂ ಮುಂದಿರುತ್ತಾರೆ. ನಮ್ಮ ಸಿನಿಮಾದ ಪ್ರಚಾರದ ವೇಳೆಯಲ್ಲೂ ಉತ್ತರ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ.

ಹೀಗಾಗಿ ಈ ಬಾರಿ ನಮ್ಮ “ತಾಜ್‌ ಮಹಲ್‌-2′ ಸಿನಿಮಾದ ಮೊದಲ ಪ್ರೀ-ರಿಲೀಸ್‌ ಇವೆಂಟ್‌ ಅನ್ನು ಉತ್ತರ ಕರ್ನಾಟಕ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕಾರ್ಯಕ್ರಮದ ಎಲ್ಲ ತಯಾರಿಗಳು ಪೂರ್ಣಗೊಂಡಿದೆ’ ಎಂದಿದ್ದಾರೆ.

“ಶ್ರೀಗಂಗಾಂಬಿಕೆ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ತಾಜ್‌ ಮಹಲ್‌-2′ ಚಿತ್ರದಲ್ಲಿ ದೇವರಾಜ ಕುಮಾರ್‌ಗೆ ಸಮೃದ್ಧಾ ಶುಕ್ಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ವಿಕ್ಟರಿ ವಾಸು, ತಬಲನಾಣಿ, ರಿತೇಶ್‌, ಕಾಕ್ರೋಚ್‌ ಸುಧಿ, ಜಿಮ್‌ ರವಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next