Advertisement
ಎರಡೂ ಕಡೆಗಳಿಂದ ತಲಾ 10 ನೌಕಾಪಡೆಯ ಹಡಗುಗಳು ಜಲಸಂಧಿಯಲ್ಲಿ ಶನಿವಾರ ಹಾದುಹೋಗಿವೆ. ಇಂಥ ಸಂದರ್ಭದಲ್ಲಿ, ಚೀನದ ಕೆಲವು ಯುದ್ಧ ನೌಕೆಗಳು ಜಲಸಂಧಿಯಲ್ಲಿ ಎರಡೂ ರಾಷ್ಟ್ರಗಳ ಗಡಿ ರೇಖೆಯ ಸಮೀಪದದಿಂದಲೂ ಹಾದುಹೋಗಿವೆ. ಒಟ್ಟಿನಲ್ಲಿ ನಾವು ಜಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ತೈವಾನ್ ಚೀನಕ್ಕೆ ರವಾನಿಸುತ್ತಿದೆ ಎನ್ನಲಾಗಿದೆ.
ಆಗಸದಲ್ಲಿ ತೈವಾನ್ ತನ್ನಲ್ಲಿರುವ ಅತ್ಯಾಧುನಿಕ ವೈಪರ್ಸ್ ಯುದ್ಧ ವಿಮಾನಗಳ ಹಾರಾಟ ನಡೆಸಲಾರಂಭಿಸಿದೆ. ಅವುಗಳಲ್ಲಿ ಅತ್ಯಂತ ಅಪಾಯಕಾರಿಯಾದ ಹಾರ್ಪನ್ ಕ್ಷಿಪಣಿಗಳನ್ನು ಹೊತ್ತೂಯ್ಯಲಾಗುತ್ತಿದೆ. ಅದಷ್ಟೇ ಅಲ್ಲದೆ, ತೈವಾನ್‌ನ ಹುಯಾಲಿನ್ ವಾಯು ನೆಲೆಯಲ್ಲಿ ಎಫ್-16 ವಿ ಯುದ್ಧ ವಿಮಾನಗಳ ಸಮೂಹವನ್ನು ಸಜ್ಜಗೊಳಿಸಿ ನಿಲ್ಲಿಸಲಾಗಿದೆ ಎಂದು ಮತ್ತೂ ಕೆಲವು ಮೂಲಗಳು ತಿಳಿಸಿವೆ.