Advertisement

ಕೆಂಭಾವಿ ಪುರಸಭೆಗೆ ತಹಶೀಲ್ದಾರ್‌ ಭೇಟಿ-ಪರಿಶೀಲನೆ

11:02 AM Dec 09, 2021 | Team Udayavani |

ಕೆಂಭಾವಿ: ಪುರಸಭೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಗೆ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ಜಿಲ್ಲಾಧಿ ಕಾರಿಗಳು ಇಂದಿನಿಂದ ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿ ಆದೇಶ ನೀಡಿದ್ದು, ನಾಮಪತ್ರ ಸಲ್ಲಿಕೆಯೂ ಇಂದಿನಿಂದಲೇ ಪ್ರಾರಂಭವಾಗಲಿದೆ. ಈಗಾಗಲೇ ಚುನಾವಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ವಾರ್ಡ್‌ ನ.1ರಿಂದ 12ರ ವರೆಗೆ ಓರ್ವ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಮತ್ತು ವಾರ್ಡ್‌ ನಂ.13ರಿಂದ 23ರ ವರೆಗೆ ಓರ್ವ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಮತಕೇಂದ್ರಗಳ ಪರಿಶೀಲನೆ ಕಾರ್ಯ ನಮ್ಮ ಅಧಿಕಾರಿಗಳು ಈಗಾಗಲೇ ನಡೆಸಿದ್ದು, ಎಲ್ಲ ಮತಕೇಂದ್ರಗಳ ಸ್ವತ್ಛತೆ ಕಾಪಾಡಲು ಪುರಸಭೆಗೆ ಸೂಚನೆ ನೀಡಲಾಗಿದೆ ಎಂದರು.

ನಂತರ ಚುನಾವಣೆಗೆ ಸಂಬಂದ ಪ್ರಕಟಣೆಗಳು, ಮತದಾರ ಯಾದಿ, ನಾಮಪತ್ರ ಸಲ್ಲಿಸುವ ಸ್ಥಳಗಳನ್ನು ಪರಿಶೀಲನೆ ಮಾಡಿದರು. ಚುನಾವಣಾಧಿಕಾರಿಗಳಾದ ಮಹಾದೇವಪ್ಪಗೌಡ ಬಿರಾದಾರ, ಪ್ರಕಾಶ ಹೊಸಮನಿ, ಉಪತಹಶೀಲ್ದಾರ್‌ ಮಲ್ಲಿಕಾರ್ಜುನ ಪಾಟೀಲ, ಕಂದಾಯ ನಿರೀಕ್ಷಕ ಲಕ್ಷ್ಮಣ ತಳವಾರ, ಗ್ರಾಮ ಲೇಖಪಾಲಕ ರಾಜೇಸಾಬ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next