Advertisement

ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರ್‌, ಸಿಬ್ಬಂದಿ ಡಾನ್ಸ್‌

02:43 PM Feb 22, 2021 | Team Udayavani |

ಬಂಗಾರಪೇಟೆ: ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ರಾಮವಾಸ್ತವ್ಯ ನೆಪದಲ್ಲಿ ತಾಲೂಕು ದಂಡಾಧಿ ಕಾರಿಗಳು ಆಗಿರುವ ತಹಶೀಲ್ದಾರ್‌ ಹಾಗೂ ಇತರೆ ಅಧಿಕಾರಿಗಳು ಕುಣಿದು ಕುಪ್ಪಳಿಸಿದಪ್ರಸಂಗ ತಾಲೂಕಿನ ಕಾಮ ಸಮುದ್ರ ಹೋಬಳಿಯ ನರಿನತ್ತ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಸರ್ಕಾರದ ಮುಖ್ಯ ಯೋಜನೆಯಾಗಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ದೇಶವನ್ನೇ ಮರೆತು ಮಹಿಳಾ ಅಧಿಕಾರಿ ಸಿಬ್ಬಂದಿ ಯೊಂದಿಗೆ ತಹಶೀಲ್ದಾರ್‌ ಎಂ.ದಯಾನಂದ್‌ ಚಲನಚಿತ್ರಗಳ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಗ್ರಾಮ ವಾಸ್ತವ್ಯಕಾರ್ಯಕ್ರಮಕ್ಕೆ ಸರ್ಕಾರ ಹಣ ವ್ಯಯಿಸುವುದು ಒಂದೆಡೆಯಾದರೆ, ಅಧಿಕಾರಿಗಳು ಕಾರ್ಯಕ್ರಮದ ಉದ್ದೇಶಗಳನ್ನು ತಿರುಚಿದ್ದಾರೆ.

ಸಾರ್ವಜನಿಕರಿಗೆ ಮನರಂಜನೆ: ಮುಖ್ಯವಾಗಿ ತಾಲೂಕು ಆಡಳಿತವು ಮೂಲ ಸೌಲಭ್ಯಗಳ ಸಮಸ್ಯೆಗಳು, ಪಿಂಚಣಿ ಸೌಲಭ್ಯಗಳು, ಕಂದಾಯ ಇಲಾಖೆಯ ಖಾತೆ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ, ರೇಷನ್‌ ಕಾರ್ಡ್‌, ಚುನಾವಣಾ ಕಾರ್ಡ್‌, ಆಧಾರ್‌ ಕಾರ್ಡ್‌ ಸೇರಿದಂತೆ ಎಲ್ಲಾ ತರಹದ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದರ ಜೊತೆಗೆ ಸರ್ಕಾರದ ಪ್ರಮುಖಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಿ ಅರಿವು ಮೂಡಿಸುವುದನ್ನು ಬಿಟ್ಟು ಕುಣಿದು ಕುಪ್ಪಳಿಸಿಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆನೀಡಿರುವುದು ಇಡೀ ಕಂದಾಯ ಇಲಾಖೆಯ ವಲಯದಲ್ಲಿ ಬೇಸರ ತಂದಿದೆ.

ತಹಶೀಲ್ದಾರ್‌ ಎಂ.ದಯಾನಂದ್‌ ಹಾಗೂ ಸಿಬ್ಬಂದಿಗಳಿಂದ ಡ್ಯಾನ್ಸ್‌ ಮಾಡಿದ್ದನ್ನು ಕಂಡು ಗ್ರಾಮಸ್ಥರು ಕೆಲಕಾಲ ಮೂಕ ಪ್ರೇಕ್ಷಕರಾಗಿನೋಡುತ್ತಿದ್ದರು. ತಹಶೀಲ್ದಾರ್‌ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಸಹಾಯಕನಿರ್ದೇಶಕ ಮುನಿರಾಜು ಸೇರಿದಂತೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ದಿವ್ಯಾ ಆರಾಧನ, ಅಂಜಲಿ, ಲಾವಣ್ಯ, ಶ್ವೇತಾ ಹಾಗೂ ಚುನಾವಣಾಶಾಖೆಯ ತೇಜಸ್‌ ಎಂಬುವವರು ಕುಣಿದು ಕುಪ್ಪಳಿಸಿದ್ದಾರೆ.

ಗ್ರಾಮಸ್ಥರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರಿಂದ ವೈರಲ್‌ ಆಗಿರುವುದರಿಂದ ಎಲ್ಲಾ ಕಡೆಯಿಂದಲೂ ಆಕ್ಷೇಪಣೆ ವ್ಯಕ್ತವಾಗುತ್ತಿವೆ.

Advertisement

ಸಮಗ್ರ ವರದಿ ನೀಡುವಂತೆ ಸೂಚನೆ :  ಬಂಗಾರಪೇಟೆತಾಲೂಕಿನತಹಶೀಲ್ದಾರ್‌ ಎಂ. ದಯಾನಂದ್‌ ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಶನಿವಾರ ಗ್ರಾಮವಾಸ್ತವ್ಯಕ್ಕೆ ಆಯ್ಕೆಯಾಗಿದ್ದ ಗಡಿಭಾಗದ ನರಿನತ್ತ ಗ್ರಾಮದಲ್ಲಿ ಕುಣಿದು ಕುಪ್ಪಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೀಕ್ಷಿಸಿದ್ದೇನೆ. ಈ ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಕೋಲಾರ ಉಪವಿಭಾಗಾಧಿಕಾರಿ ವಿ.ಸೋಮಶೇಖರ್‌ ಅವರಿಗೆ ಸೂಚಿಸಲಾಗಿದ್ದು, ಗ್ರಾಮವಾಸ್ತವ್ಯ ಕಾರ್ಯಕ್ರಮದ ವಿರುದ್ದ ಯಾರೇ ನಡೆದು ಕೊಂಡರೂ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next