ಬೀಳಗಿ: ತಾಲೂಕಿನ ದಂಡಾಧಿಕಾರಿಗಳ ಕಚೇರಿಯೂ ಆಗಿರುವ ಪಟ್ಟಣದ ತಹಶೀಲ್ದಾರ್ ಕಚೇರಿಯ ಶೌಚಾಲಯ ಗಬ್ಬೆದ್ದು ಹೋಗಿದ್ದು, ಜನರ ಉಪಯೋಗಕ್ಕೆ ಬಾರದಂತಾಗಿದೆ.
ದಂಡಾಧಿಕಾರಿಗಳ ಕಚೇರಿಗೆ ಹೋದರೆ,ದುರ್ವಾಸನೆಯ ದಂಡ ಜನರಿಗೆಎದುರಾಗಿದೆ ಎಂಬ ಅಸಮಾಧಾನ ಕೇಳಿ ಬರುತ್ತಿದೆ.
ತಹಶೀಲ್ದಾರ್ ಕಚೇರಿ ಹಿಂಬದಿ ಇರುವ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಪೂರ್ಣಗಬ್ಬೆದ್ದು ಹೋಗಿದ್ದು, ಕಸಗಡ್ಡಿಯಿಂದ ತುಂಬಿಕೊಂಡಿದೆ. ಹೀಗಾಗಿ ಜನರು ಇಲ್ಲಿನ ಶೌಚಾಲಯಬಳಸದೇ, ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ.
ತಹಶೀಲ್ದಾರ್ ಕಚೇರಿಗೆ ನಿತ್ಯವೂ ಹಲವು ಕೆಲಸದ ನಿಮಿತ್ತ ಸಾವಿರಾರು ಜನರು ತಹಶೀಲ್ದಾರ್ ಕಚೇರಿಗೆಬರುತ್ತಾರೆ. ಅವರಿಗೆ ಕುಡಿವ ನೀರು, ಶೌಚಾಲಯ,ನೆರಳಿನ ವ್ಯವಸ್ಥೆ ಸಹಿತ ಸೌಲಭ್ಯ ಕಲ್ಪಿಸಬೇಕಿರುವುದು ತಾಲೂಕು ಆಡಳಿತದ ಜವಾಬ್ದಾರಿ. ನಾಗರಿಕ ಹಕ್ಕು ಪೂರೈಸಲೇಬೇಕು ಎಂಬುದು ನಿಯಮ ಕೂಡ.ಇಂತಹ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಚೇರಿ ಸುತ್ತ ಮಲೀನ: ತಹಶೀಲ್ದಾರ್ ಕಚೇರಿಯ ಸುತ್ತ ಮೂತ್ರ ವಿಸರ್ಜನೆಯಿಂದ ಹದಗೆಟ್ಟು, ದುರ್ಗಂಧ ಬೀರುತ್ತಿದೆ. ಕಚೇರಿಗೆ ತಮ್ಮ ಕೆಲಸಕ್ಕೆ ಬಂದ ಜನತೆ ಮೂತ್ರ ವಿಸರ್ಜನೆಗೆ ಸಾರ್ವಜನಿಕ ಶೌಚಾಲಯ ಇದ್ದರುಕೂಡಾ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಮೂಗು ಮುಚ್ಚಿಕೊಂಡೆ ಶೌಚ ಮಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಶೌಚಾಲಯದ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಜನರ ಒತ್ತಾಯವಾಗಿದೆ.
ತಾಲೂಕಿಗೆ ತಹಶೀಲ್ದಾರ್ ಕಚೇರಿಯೇ ಮುಖ್ಯ. ಈ ಕಚೇರಿಗೆ ತಾಲೂಕಿನ ಎಲ್ಲಹಳ್ಳಿಯ ಜನರೂ ನಿತ್ಯ ಬರುತ್ತಾರೆ. ಇಲ್ಲಿ ಜನರಿಗೆ ಕನಿಷ್ಠ ಶೌಚಾಲಯಕ್ಕೆ ಹೋಗಲೂ ಸರಿಯಾದವ್ಯವಸ್ಥೆ ಇಲ್ಲ. ಲಕ್ಷಾಂತರ ಖರ್ಚು ಮಾಡಿ, ನಿರ್ಮಿಸಿದ ಶೌಚಾಲಯ ಗಬ್ಬೆದ್ದು ಹೋಗಿದೆ.ಶೌಚಾಲಯ ನಿರ್ವಹಣೆಗೆ ಅನುದಾನ ಇದ್ದರೂಬಳಕೆ ಮಾಡಿಲ್ಲವೋ, ಬಳಕೆ ಮಾಡಿದ್ದಾಗಿಖರ್ಚು ಹಾಕಿದ್ದಾರೋ ಗೊತ್ತಿಲ್ಲ. ಜನರ ನೈಸರ್ಗಿಕಕ್ರಿಯೆಗೂ ತೊಂದರೆಯಾಗುವ ಸ್ಥಿತಿ ತಾಲೂಕು ದಂಡಾಧಿಕಾರಿಗಳ ಕಚೇರಿ ಆವರಣದಲ್ಲಿದೆ. ಇದನ್ನು ಕೂಡಲೇ ಸರಿಪಡಿಸಬೇಕು.
-ಶ್ರವಣಕುಮಾರ ಸುರಗಿಮಠ, ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ವ್ಯಕಿ
ಶೌಚಾಲಯ ಅವ್ಯವಸ್ಥೆ ಕುರಿತು ಗಮನಕ್ಕೆ ಬಂದಿರಲಿಲ್ಲ. ಈ ಕೂಡಲೆಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸಿಸಾರ್ವಜನರ ಉಪಯೋಗಕ್ಕೆ ಅನುಕೂಲ ಮಾಡಲಾಗುವುದು.
-ಬಿ.ಪಿ. ಅಜೂರ, ತಹಶೀಲ್ದಾರ್, ಬೀಳಗಿ
-ಚೇತನ ಆರ್. ಕಣವಿ