Advertisement

ತಹಶೀಲ್ದಾರ್‌ ನೇಣಿಗೆ ಶರಣು

05:15 AM Jul 20, 2017 | Team Udayavani |

ತಿ.ನರಸಿಪುರ: ಕೆಲಸದೊತ್ತಡ ಹಾಗೂ ಅನಾರೋಗ್ಯ ಹಿನ್ನೆಲೆಯಲ್ಲಿ ಡೆತ್‌ನೋಟ್‌ ಬರೆದಿಟ್ಟ ತಹಶೀಲ್ದಾರ್‌, ಇಲ್ಲಿನ ಕಬಿನಿ ನೀರಾವರಿ ನಿಗಮದ ವಸತಿ ಗೃಹದಲ್ಲಿ ಮಂಗಳವಾರ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ.

Advertisement

ಮೈಸೂರು ಜಿಲ್ಲೆ ತಿ.ನರಸೀಪುರ ತಹಶೀಲ್ದಾರ್‌ ಬಿ.ಶಂಕರಯ್ಯ(58) ಆತ್ಮ ಹತ್ಯೆಗೆ ಶರಣಾದ ದುರ್ದೈವಿ. ಕೆಲಸದೊತ್ತಡ, ಅನಾರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಬುಧವಾರ ಬೆಳಗ್ಗೆ ಕಾರು ಚಾಲಕ ಸುರೇಶ್‌ ಬಾಗಿಲು ತೆಗೆದು ನೋಡಿ ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಎಂ.ಹಟ್ಣ ಗ್ರಾಮದವರಾದ ಶಂಕರಯ್ಯ ಪಾಂಡವಪುರದಿಂದ ತಿ.ನರಸೀಪುರಕ್ಕೆ ವರ್ಗಾವಣೆ ಗೊಂಡಿದ್ದು, ಕಳೆದೊಂದು ವರ್ಷದಿಂದ ತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಮಂಡ್ಯದ ಕಾವೇರಿ ನಗರದಲ್ಲಿ ಕುಟುಂಬ ಸದಸ್ಯರು ವಾಸವಾಗಿದ್ದು, ಶಂಕರಯ್ಯ ತಿ.ನರಸಿಪುರದ ಕಬಿನಿ ನೀರಾವರಿ ನಿಗಮದ ವಸತಿ ಗೃಹದಲ್ಲೇ ವಾಸ್ತವ್ಯ ಮಾಡುತ್ತಿದ್ದರು ಎನ್ನಲಾಗಿದೆ.

ಸಾವಿಗೂ ಮುನ್ನಾ ಪತ್ನಿಗೆ ಪತ್ರ: ಸಾವಿಗೆ ಶರಣಾಗುವ ಮೊದಲು ಪತ್ರ ಬರೆದಿಟ್ಟಿರುವ ಶಂಕರಯ್ಯ, ಮಗಳ ವಿವಾಹ ವನ್ನು ನೀನೇ(ಪತ್ನಿ) ನೆರವೇರಿಸು. ಇಬ್ಬರು ಪುತ್ರರನ್ನು ಚೆನ್ನಾಗಿ ನೋಡಿಕೋ ಎಂದು ತಿಳಿಸಿದ್ದಾರೆ ಎಂದು
ಪೊಲೀಸ್‌ ಮೂಲಗಳು ತಿಳಿಸಿವೆ.

ಪುತ್ರಿಯ ವಿವಾಹ ಮುಂದಿನ ಸೆಪ್ಟೆಂಬರ್‌ನಲ್ಲಿ ನಿಶ್ಚಯವಾಗಿದ್ದರೂ ಶಂಕರಯ್ಯ ಆತ್ಮಹತ್ಯೆಗೆ ಶರಣಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ವಸತಿ ಗೃಹದಲ್ಲಿ ಏಕಾಂಗಿಯಾಗಿದ್ದ ಶಂಕರಯ್ಯ ಮಂಗಳವಾರ ರಾತ್ರಿ 9.15ರ ಸಮಯದಲ್ಲಿ ಪತ್ನಿಗೆ ದೂರವಾಣಿ ಕರೆ ಮಾಡಿ, ಇಲಾಖೆಯಲ್ಲಿನ ಕೆಲಸದೊತ್ತಡ ಮತ್ತು ಅನಾರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next