Advertisement

UNESCO: ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಠಾಗೂರರ “ಶಾಂತಿನಿಕೇತನ”

09:22 PM Sep 17, 2023 | Team Udayavani |

ಕೋಲ್ಕತಾ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಠಾಗೂರ್‌ ಅವರ ಶಾಂತಿನಿಕೇತನವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

Advertisement

ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಬೋಲ್ಪುರ್‌ ನಗರದ ಸಮೀಪ ಕವಿ, ತತ್ವಜ್ಞಾನಿ ರವೀಂದ್ರನಾಥ್‌ ಠಾಗೂರ್‌ ಅವರು 1901ರಲ್ಲಿ “ಶಾಂತಿನಿಕೇತನ’ವನ್ನು ಸ್ಥಾಪಿಸಿದರು. ಇದರಲ್ಲಿ ವಸತಿ ಶಾಲೆ ಹಾಗೂ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಆಧರಿಸಿದ ಕಲೆಯ ಕೇಂದ್ರವಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ ಮಾನವೀಯತೆಯ ಏಕತೆಯ ದೃಷ್ಟಿಯಿಂದ ಕವಿ ಠಾಗೂರರು ಈ ಕೇಂದ್ರವನ್ನು ಸ್ಥಾಪಿಸಿದರು. ನಂತರ 1921ರಲ್ಲಿ “ವಿಶ್ವ ಭಾರತೀ’ ಎಂಬ ಜಾಗತಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಶಾಂತಿನಿಕೇತನವು ಪ್ರಾಚೀನ, ಮಧ್ಯಕಾಲೀನ ಮತ್ತು ಜಾನಪದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.

ಇದೀಗ ಶಾಂತಿನಿಕೇತನ ಪಟ್ಟಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next