Advertisement

ಶನಿವಾರ ಟಗರು ಶತದಿನೋತ್ಸವ

03:09 PM Jun 21, 2018 | Sharanya Alva |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವು ಯಶಸ್ವಿಯಾಗಿ ನೂರು ದಿನ ಪೂರೈಸುವ ಮೂಲಕ ಈ ವರ್ಷದ ಮೊದಲ ಹಂಡ್ರೆಡ್‌ ಡೇಸ್‌ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಟಗರು’ ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಬೆಂಗಳೂರಿನ ವೈಟ್‌ ಪೆಟಲ್ಸ್‌ನಲ್ಲಿ ಆಯೋಜಿಸಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌. 

Advertisement

ಈ ಕಾರ್ಯಕ್ರಮವು ಶನಿವಾರ (ಜೂನ್‌ 23) ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಅಂಬರೀಶ್‌, ಉಪೇಂದ್ರ, ಪುನೀತ್‌ ರಾಜಕುಮಾರ್‌, ಮುರಳಿ ಮತ್ತು ಯಶ್‌ ಭಾಗವಹಿಸುತ್ತಿರುವುದು. ಜೊತೆಗೆ ಸಚಿವ ಡಿ.ಕೆ. ಶಿವಕುಮಾರ್‌ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಂತೆ. 

ಇವರೆಲ್ಲರ ಸಮ್ಮುಖದಲ್ಲಿ ಚಿತ್ರಕ್ಕೆ ದುಡಿದ ಕಲಾವಿದರು, ತಂತ್ರಜ್ಞರು, ವಿತರಕರು ಮತ್ತು ಚಿತ್ರ ಪ್ರದರ್ಶನ ಮಾಡಿದ ಪ್ರದರ್ಶಕರಿಗೆ ಸ್ಮರಣಫ‌ಲಕಗಳನ್ನು ಕೊಟ್ಟು ಸನ್ಮಾನಿಸಲಾಗುತ್ತದೆ.ಕಾರ್ಯಕ್ರಮದ ಇನ್ನೊಂದು ಸ್ಪೆಷಾಲಿಟಿಯೆಂದರೆ, ಸೂರಿ ಮತ್ತು ಯೋಗರಾಜ್‌ ಭಟ್‌ ಇಬ್ಬರೂ ಸೇರಿ ಕಾರ್ಯಕ್ರಮದ ನಿರೂಪಣೆ ಮಾಡುವುದು. ಇದರ ಜೊತೆಗೆ ವಾಸು ದೀಕ್ಷಿತ್‌ ಮತ್ತು ತಂಡದ ಕಾರ್ಯಕ್ರಮವಿರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next