Advertisement

ಟಗರು ಶತದಿನ ಸಂಭ್ರಮ

11:03 AM Jun 04, 2018 | Team Udayavani |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರ ಭರ್ಜರಿಯಾಗಿ ಶತದಿನ ಪೂರೈಸಿದೆ. ಈ ಖುಷಿಯನ್ನು ಶಿವರಾಜ ಕುಮಾರ್‌ ಅಭಿಮಾನಿಗಳು ಸಂಘಗಳು ಭಾನುವಾರ ಅದ್ಧೂರಿಯಾಗಿ ಆಚರಿಸಿದೆ. ಸಂತೋಷ್‌ ಚಿತ್ರಮಂದಿರದಲ್ಲಿ ಅಭಿಮಾನಿಗಳು “ಟಗರು’ ತಂಡವನ್ನು ಸನ್ಮಾನಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.

Advertisement

ಶಿವರಾಜಕುಮಾರ್‌, ಮಾನ್ವಿತಾ ಹರೀಶ್‌, ಧನಂಜಯ್‌, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಸೇರಿದಂತೆ ಚಿತ್ರತಂಡ ಶತದಿನ ಸಂಭ್ರಮದಲ್ಲಿ ಭಾಗಿಯಾಗಿತ್ತು. “ಟಗರು’ ತಂಡವನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕಿಕ್ಕಿರಿದ್ದು ಸೇರಿದ್ದು, ಜೈಕಾರ, ಶಿಳ್ಳೆಯೊಂದಿಗೆ ತಮ್ಮ ಅಭಿಮಾನ ಪ್ರದರ್ಶಿಸಿದರು. 

ಆಭಿಮಾನಿಗಳೊಂದಿಗೆ ಕೇಕ್‌ ಕತ್ತರಿಸಿ ಖುಷಿ ಹಂಚಿಕೊಂಡ ಶಿವಣ್ಣ, ಅಭಿಮಾನಿಗಳ ಒತ್ತಾಯಕ್ಕೆ “ಟಗರು’ ಚಿತ್ರದ “ಟಗರು ಬಂತು ಟಗರು’ ಹಾಡಿಗೆ ಸ್ಟೆಪ್‌ ಹಾಕಿ ರಂಜಿಸಿದರು. ಇದೇ ವೇಳೆ ಶಿವರಾಜಕುಮಾರ್‌ ಅಭಿಮಾನಿ ಸಂಘಗಳು “ಟಗರು’ ಚಿತ್ರತಂಡವನ್ನು ಸನ್ಮಾನಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next