Advertisement

Table Tennis Star; ಬಾಳ್ವೆಯ ದೊಡ್ಡ ಗೆಲುವು ದಾಖಲಿಸಿದ ಮನಿಕಾ ಬಾತ್ರ

12:16 AM May 07, 2024 | Team Udayavani |

ಕೆಎಇಸಿ (ಸೌದಿ ಅರೇಬಿಯ): ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿ ಮನಿಕಾ ಬಾತ್ರ ಅವರು ಸೌದಿ ಸ್ಮ್ಯಾಷ್‌ ಕೂಟದಲ್ಲಿ ತನ್ನ ಬಾಳ್ವೆಯ ಬಲುದೊಡ್ಡ ಗೆಲುವೊಂದನ್ನು ದಾಖಲಿಸಿ ಪ್ರಿ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

Advertisement

39ನೇ ರ್‍ಯಾಂಕಿನ ಬಾತ್ರ ಅವರು ವಿಶ್ವದ ಎರಡನೇ ರ್‍ಯಾಂಕಿನ ಚೀನದ ವಾಂಗ್‌ ಮನ್ಯು ಅವರನ್ನು ಕೇವಲ 37 ನಿಮಿಷಗಳ ಹೋರಾಟದಲ್ಲಿ 6-11, 11-5, 11-7, 12-10 ಗೇಮ್‌ಗಳಿಂದ ಉರುಳಿಸಿ ಅಚ್ಚರಿಯ ಫ‌ಲಿತಾಂಶಕ್ಕೆ ಕಾರಣರಾದರು. ಮಂಗಳವಾರ ನಡೆಯುವ ಮುಂದಿನ ಸುತ್ತಿನ ಪಂದ್ಯದಲ್ಲಿ ಬಾತ್ರ ಅವರು ಜರ್ಮನಿಯ 14ನೇ ರ್‍ಯಾಂಕಿನ ನಿನಾ ಮಿಟ್ಟೆಹಾಮ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next