Advertisement

BJP; ಮಂಡಿಯಿಂದ ಗೆದ್ದರೆ ಬಾಲಿವುಡ್‌ಗೆ ವಿದಾಯ: ಕಂಗನಾ ಘೋಷಣೆ

01:29 AM May 19, 2024 | Team Udayavani |

ಶಿಮ್ಲಾ: ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್‌ಗೆ ವಿದಾಯ ಹೇಳುತ್ತೇನೆ ಎಂದು ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್‌ ಹೇಳಿದ್ದಾರೆ. ಸದ್ಯ ಒಪ್ಪಿಕೊಂಡಿ ರುವ ಸಿನೆಮಾಗಳ ಚಿತ್ರೀಕರಣ ಮುಕ್ತಾ ಯಗೊಳಿಸುತ್ತೇನೆ. ಅನಂತರ ಹಂತ ಹಂತವಾಗಿ ಬಾಲಿವುಡ್‌ಗೆ ವಿದಾಯ ಹೇಳು ವುದಾಗಿ ತಿಳಿಸಿದ್ದಾರೆ. ರಾಜಕೀಯದಲ್ಲಿಯೇ ಮುಂದುವರಿಯುತ್ತೀರಾ ಅಥವಾ ಚಿತ್ರರಂಗದ ಲ್ಲಿಯೇ ಇರುತ್ತೀರಾ ಎಂಬ ಬಗ್ಗೆ ಹಲವು ನಿರ್ಮಾಪ ಕರು ಪ್ರಶ್ನಿಸಿದ್ದಾರೆ. ಸದ್ಯ ಇರುವ ಸಿನೆಮಾಗಳನ್ನು ಮುಗಿಸುತ್ತೇನೆ. ಅನಂತರ ರಾಜಕೀಯದಲ್ಲಿ ಮುಂದುವರಿಯುವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next