Advertisement

RCB ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ..; ಚೆನ್ನೈ ವಿರುದ್ಧ ಗೆಲ್ಲಬೇಕು, ಲಕ್ನೋ ಸೋಲಬೇಕು

12:29 AM May 14, 2024 | Team Udayavani |

ಬೆಂಗಳೂರು: ಸೋಲಿನ ಮೇಲೆ ಸೋಲನುಭವಿಸಿ ಕಟ್ಟಕಡೆಯ ಸ್ಥಾನಕ್ಕೆ ಕುಸಿದು, ಇನ್ನೇನು ಹೊರಬಿತ್ತು ಎಂಬ ಸ್ಥಿತಿಯಲ್ಲಿದ್ದ ಕನ್ನಡಿಗರ ನೆಚ್ಚಿನ ರಾಯಲ್‌ ಚಾಲೆಂಜರ್ ಬೆಂಗ ಳೂರು ತಂಡವೀಗ ಸತತ 5 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ನೆಗೆದದ್ದು ನಿಜಕ್ಕೂ ಅಚ್ಚರಿ. ಇಲ್ಲಿಂದ 4ನೇ ಸ್ಥಾನಕ್ಕೇರಿ, ಇದನ್ನು ಉಳಿಸಿಕೊಂಡರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ!

Advertisement

ಆದರೆ ಈ ಹಾದಿ ಅಷ್ಟು ಸುಲಭ ವಲ್ಲ. ಇಲ್ಲಿ ಲೆಕ್ಕಾಚಾರದ ನಾನಾ ಆಟಗಳಿವೆ. ಮುಖ್ಯವಾಗಿ, ಆರ್‌ಸಿಬಿಗೆ ಉಳಿದಿರುವುದು ಒಂದೇ ಪಂದ್ಯ. ಇದನ್ನು ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್‌ ಏರಿಸಿಕೊಂಡು, ಉಳಿದ ಕೆಲವು ತಂಡಗಳು ಸೋತರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಸಾಧ್ಯ!

ಚೆನ್ನೈ ಎದುರಾಳಿ
ಆರ್‌ಸಿಬಿಯ ಕೊನೆಯ ಎದುರಾಳಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌. ಇವೆ ರಡೂ ಈ ಋತುವಿನ ಉದ್ಘಾಟನ ಪಂದ್ಯ ವಾಡಿದ ತಂಡಗಳು. ಚೆನ್ನೈ ಯಲ್ಲಿ ನಡೆದ ಈ ಮುಖಾ ಮುಖೀಯಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಸೋತಿತ್ತು. ಶನಿವಾರ ಬೆಂಗ ಳೂರಿ ನಲ್ಲಿ ಇತ್ತಂಡಗಳ ನಡು ವಿನ ದ್ವಿತೀಯ ಸುತ್ತಿನ ಪಂದ್ಯ ನಡೆಯಲಿದೆ. ಇದಕ್ಕೆ ಆರ್‌ಸಿಬಿ ದೊಡ್ಡ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ.

ರನ್‌ರೇಟ್‌ ಲೆಕ್ಕಾಚಾರ
ಆರ್‌ಸಿಬಿ 13 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಚೆನ್ನೈಯನ್ನು ಮಣಿಸಲೇಬೇಕಿದೆ. ಅಷ್ಟೇ ಅಲ್ಲ, ರನ್‌ರೇಟ್‌ನಲ್ಲೂ ಚೆನ್ನೈಯನ್ನು ಮೀರಿಸಬೇಕು. ಸದ್ಯ ಚೆನ್ನೈ 0.528 ರನ್‌ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಹೊಂದಿರುವ ಅಂಕ 14. ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದ್ದು, 5ನೇ ಸ್ಥಾನಿಯಾಗಿದೆ.

ರನ್‌ರೇಟ್‌ನಲ್ಲಿ ಚೆನ್ನೈಯನ್ನು ಮೀರಿಸಬೇಕಾದರೆ ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಗೆಲ್ಲಬೇಕಿದೆ. ಉದಾ ಹರಣೆಗೆ, ಆರ್‌ಸಿಬಿ ಮೊದಲು ಬ್ಯಾಟಿಂಗ್‌ ನಡೆಸಿ 200 ರನ್‌ ಗಳಿಸಿದರೆ, ಚೆನ್ನೈಯನ್ನು 182ಕ್ಕೆ ನಿಯಂತ್ರಿಸಬೇಕು.
ಚೇಸಿಂಗ್‌ ಲೆಕ್ಕಾಚಾರ ಬೇರೆ ಇದೆ. ಆರ್‌ಸಿಬಿಗೆ 201 ರನ್‌ ಟಾರ್ಗೆಟ್‌ ಲಭಿಸಿದರೆ ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು.

Advertisement

ಆದರೆ ಚೆನ್ನೈ ಪ್ಲೇ ಆಫ್ ಪ್ರವೇ ಶಿಸಬೇಕಾದರೆ ಆರ್‌ಸಿಬಿ ವಿರುದ್ಧ ಗೆದ್ದು ಬಂದರೆ ಸಾಕು, ಇಲ್ಲಿ ಯಾವುದೇ ಲೆಕ್ಕಾಚಾರದ ಹಂಗಿಲ್ಲ.

ಲಕ್ನೋ ಫ‌ಲಿತಾಂಶ ನಿರ್ಣಾಯಕ
ಇದೇ ವೇಳೆ ಆರ್‌ಸಿಬಿ ಪಾಲಿಗೆ ಲಕ್ನೋ ಪಂದ್ಯದ ಫ‌ಲಿತಾಂಶವೂ ನಿರ್ಣಾಯಕವಾಗುತ್ತದೆ. 12 ಪಂದ್ಯಗಳಿಂದ 12 ಅಂಕ ಗಳಿಸಿರುವ ಲಕ್ನೋ ತನ್ನ ಮುಂದಿನೆರಡು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಸೋಲಬೇಕು (ಡೆಲ್ಲಿ, ಮುಂಬೈ). ಸದ್ಯ ಲಕ್ನೋ ರನ್‌ರೇಟ್‌ ಮೈನಸ್‌ನಲ್ಲಿದೆ. ರವಿವಾರದ ಅಂತ್ಯದ ವೇಳಾ ಪಟ್ಟಿಯಂತೆ, ಡೆಲ್ಲಿ ಮತ್ತು ಗುಜರಾತ್‌ಗೂ 14 ಅಂಕ ಗಳಿಸುವ ಮಾರ್ಗವಿದೆ.

ಇನ್ನು ಹೈದರಾಬಾದ್‌. ಈಗಾ ಗಲೇ 14 ಅಂಕ ಹೊಂದಿದೆ. ಇನ್ನೂ 2 ಪಂದ್ಯಗಳನ್ನು ಆಡಲಿಕ್ಕಿದೆ. ಎರಡೂ ಪಂದ್ಯ ನಡೆಯುವುದು ತವರಿನ ಹೈದರಾಬಾದ್‌ನಲ್ಲಿ. ಎರಡನ್ನೂ ಗೆದ್ದರೆ ಟಾಪ್‌-2 ಆಗಲಿದೆ. ಎರಡನ್ನೂ ಸೋತರೆ ತೊಂದರೆಗೆ ಸಿಲುಕಲಿದೆ!

Advertisement

Udayavani is now on Telegram. Click here to join our channel and stay updated with the latest news.

Next