Advertisement

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

10:52 PM May 09, 2024 | Team Udayavani |

ಜೆಡ್ಡಾ (ಸೌದಿ ಅರೇಬಿಯ): ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ (ವಿಶ್ವ ಟೇಬಲ್‌ ಟೆನಿಸ್‌) ಟೂರ್ನಿಯಲ್ಲಿ ಭಾರತದ ತಾರೆ ಮಣಿಕಾ ಬಾತ್ರಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Advertisement

ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ವಿಶ್ವ ನಂ.14ರ ಆಟಗಾರ್ತಿ, ಜರ್ಮನಿಯ ನಿನಾ ಮಿಟ್ಟೆಲ್‌ಹ್ಯಾಮ್‌ ವಿರುದ್ಧ ಗೆಲುವು ದಾಖಲಿಸಿದರು. ಗೆಲುವಿನ ಅಂತರ 11- 6, 11 -9, 11 -7 ಅಂಕ. ಇಬ್ಬರ ಮಧ್ಯೆ 22 ನಿಮಿಷಗಳ ಕದನ ನಡೆಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಕಾ, ವಿಶ್ವ ನಂ. 5ನೇ ಶ್ರೇಯಾಂಕದ ಜಪಾನ್‌ ಆಟಗಾರ್ತಿ, ಹೀನಾ ಹಯತಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next