Advertisement

ಮೆಕಾಯ್‌ ಗಾಯಳು: ವಿಂಡೀಸ್‌ ತಂಡಕ್ಕೆ ಜಾಸನ್‌ ಹೋಲ್ಡರ್‌

09:14 PM Oct 28, 2021 | Team Udayavani |

ಶಾರ್ಜಾ: ವೆಸ್ಟ್‌ ಇಂಡೀಸ್‌ ತಂಡದ ಎಡಗೈ ವೇಗಿ ಒಬೆಡ್‌ ಮೆಕಾಯ್‌ ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಸೇರ್ಪಡೆಗೊಂಡಿದ್ದಾರೆ.

Advertisement

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಒಬೆಡ್‌ ಮೆಕಾಯ್  ಬಲಗಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದಿರಲಿಲ್ಲ. ಗಾಯದ ಸಮಸ್ಯೆ ತುಸು ಗಂಭೀರವಾಗಿರುವ ಕಾರಣ ಅವರನ್ನು ಕೂಟದಿಂದ ಕೈಬಿಡಲಾಗಿದೆ ಎಂದು ವಿಂಡೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಹೋಲ್ಡರ್‌ ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಶುಕ್ರವಾರ ಬಾಂಗ್ಲಾ ವಿರುದ್ಧ ಹೋಲ್ಡರ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

“ಹೋಲ್ಡರ್‌ ಯುಎಇಯಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಅವರ ಅನುಭವ ತಂಡಕ್ಕೆ ಬಹು ದೊಡ್ಡ ಕೊಡುಗೆ ಆಗಲಿದೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಮುಖ್ಯ ಆಯ್ಕೆಗಾರ ರೋಜರ್‌ ಹಾಪರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next