Advertisement

ಟಿ20 ವಿಶ್ವಕಪ್‌ : ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು

08:04 AM Nov 02, 2022 | Team Udayavani |

ಅಡಿಲೇಡ್‌: ಟಿ20 ವಿಶ್ವಕಪ್‌ ಕೂಟದ ಬುಧವಾರದ ಮಹತ್ವದ ಸೂಪರ್‌ 12 ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿಯಾದರೂ ಭಾರತದ ಬ್ಯಾಟಿಂಗ್‌ ಶಕ್ತಿಯ ವಿಶ್ವರೂಪ ಪ್ರದರ್ಶ ನಗೊಳ್ಳುವುದು ಅತೀ ಮುಖ್ಯವಾಗಿದೆ. ಬ್ಯಾಟಿಂಗ್‌ನಲ್ಲಿ ಸತತ ವೈಫ‌ಲ್ಯ ಕಾಣು ತ್ತಿರುವ ಕೆಎಲ್‌ ರಾಹುಲ್‌ ಅವರಿಗೆ ಶ್ರೇಷ್ಠ ನಿರ್ವಹಣೆ ನೀಡಲು ಇದೊಂದು ಉತ್ತಮ ವೇದಿಕೆಯೂ ಆಗಿದೆ.

Advertisement

ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿಯೂ ಬಾಂಗ್ಲಾದೇಶವನ್ನು ಹಗುರ ವಾಗಿ ಕಾಣುವ ಸಾಧ್ಯತೆಯಿಲ್ಲ.ಉಭಯ ತಂಡಗಳ ಶಕ್ತಿ ಸಾಮರ್ಥ್ಯವನ್ನು ಗಮನಿ ಸಿದರೆ ಭಾರತವೇ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಆದರೆ ಬಾಂಗ್ಲಾ ಯಾವುದೇ ಕ್ಷಣದಲ್ಲಾದರೂ ಅಚ್ಚರಿಯ ಫ‌ಲಿತಾಂಶಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

ಪರ್ತ್‌ನ ಪಿಚ್‌ನಲ್ಲಿ ಭಾರತೀಯ ಆಟಗಾರರು ರನ್‌ ಗಳಿಸಲು ಒದ್ದಾ ಡಿರುವುದು ಕೋಚ್‌ ರಾಹುಲ್‌ ದ್ರಾವಿಡ್‌ಗೆ ಚಿಂತೆಯನ್ನುಂಟುಮಾಡಿದೆ. ಸೂರ್ಯಕುಮಾರ್‌ ಯಾದವ್‌ ಅವರನ್ನು ಬಿಟ್ಟರೆ ಉಳಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಭಾರೀ ವೈಫ‌ಲ್ಯ ಅನುಭವಿಸಿದ್ದರು. ಇದರ ಜತೆ ಕೆಎಲ್‌ ರಾಹುಲ್‌ ಅವರ ಸತತ ವೈಫ‌ಲ್ಯ ಪ್ರಶ್ನಿಸುವಂತಾಗಿದೆ. ಪಾಕಿಸ್ಥಾನ ಮತ್ತು ದಕ್ಷಿಣ ಆಫ್ರಿಕಾ ಸಹಿತ ಮೊದಲ ಮೂರು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 22 ರನ್‌. ಆದರೂ ಬೆಂಗಳೂರಿನ ಆಟಗಾರನ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟಿರುವ ದ್ರಾವಿಡ್‌ ಬಾಂಗ್ಲಾ ವಿರುದ್ಧವೂ ಅವರನ್ನು ಆರಂಭಿಕರಾಗಿ ಆಡಿಸುವ ಸಾಧ್ಯತೆಯಿದೆ.

ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ವೇನೂ ಬಲಷ್ಠ ತಂಡವೇನಲ್ಲ. ಸಾಧಾರಣ ಬೌಲಿಂಗ್‌ ದಾಳಿ ಹೊಂದಿರುವ ಬಾಂಗ್ಲಾ ವಿರುದ್ಧ ರಾಹುಲ್‌ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ. ಈ ಮೂಲಕ ರಾಹುಲ್‌ ಫಾರ್ಮ್ಗೆ
ಮರಳಲು ಪ್ರಯತ್ನಿಸಬಹುದು. ಸೂರ್ಯಕುಮಾರ್‌ ಯಾದವ್‌ ಮತ್ತು ವಿರಾಟ್‌ ಕೊಹ್ಲಿ ಕೆಲವು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದ್ದಾರೆ. ರೋಹಿತ್‌ ಶರ್ಮ ನೆದರ್ಲೆಂಡ್ಸ್‌ ವಿರುದ್ಧ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ದಿನೇಶ್‌ ಕಾರ್ತಿಕ್‌ ಗಾಯಗೊಂಡಿದ್ದರಿಂದ ರಿಷಬ್‌ ಪಂತ್‌ ಆಟವಾಡುವ ಬಳಗಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.

ಬಾಂಗ್ಲಾದೇಶದ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿದೆ. ತಂಡದಲ್ಲಿ ನಾಲ್ವರು ಎಡಗೈ ಆಟಗಾರರಿದ್ದಾರೆ. ಶಕಿಬ್‌, ಸೌಮ್ಯಾ ಸರ್ಕಾರ್‌, ನಜ್ಮುಲ್‌ ಹೊಸೈನ್‌ ಶಂಟೊ ಮತ್ತು ಅಫಿಫ್ ಹೊಸೈನ್‌ ಧ್ರುವ್‌ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಭಾರತ ಒತ್ತಡಕ್ಕೆ ಬೀಳುವ ಸಾಧ್ಯತೆಯಿದೆ.

Advertisement

2016ರ ಪಂದ್ಯದ ನೆನಪು
2016ರ ಟಿ20 ವಿಶ್ವಕಪ್‌ನಲ್ಲಿಯೂ ಬಾಂಗ್ಲಾದೇಶ ಭಾರತಕ್ಕೆ ತೀವ್ರ ಪೈಪೋಟಿ ಯನ್ನು ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಆ ಪಂದ್ಯದಲ್ಲಿ ಭಾರತ ಕೊನೆಕ್ಷಣದಲ್ಲಿ ಒಂದು ರನ್ನಿನಿಂದ ರೋಚಕ ಗೆಲುವು ಒಲಿಸಿಕೊಂಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 7 ವಿಕೆಟಿಗೆ 146 ರನ್‌ ಗಳಿಸಿದ್ದರೆ ಬಾಂಗ್ಲಾದೇಶ ಕೊನೆಯ ಓವರಿನಲ್ಲಿ ಗೆಲ್ಲಲು 11 ರನ್‌ ತೆಗೆಯಬೇಕಾಗಿತ್ತು. ಅಂತಿಮವಾಗಿ ಅಂತಿಮ ಎಸೆತದಲ್ಲಿ 2 ರನ್‌ ಬೇಕಿತ್ತು. ಹಾರ್ದಿಕ್‌ ಪಾಂಡ್ಯ ಎಸೆದಿದ್ದ ಈ ಎಸೆತದಲ್ಲಿ ಬಾಂಗ್ಲಾಕ್ಕೆ ಯಾವುದೇ ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ಒಂದು ರನ್ನಿನ ಜಯ ಸಾಧಿಸಿತ್ತು.

ಇಂದಿನ ಪಂದ್ಯ
ನೆದರ್ಲೆಂಡ್ಸ್‌-ಜಿಂಬಾಬ್ವೆ
ಆರಂಭ: ಬೆ. 9.30

ಭಾರತ-ಬಾಂಗ್ಲಾದೇಶ
ಆರಂಭ: ಅ. 1.30
ಸ್ಥಳ: ಅಡಿಲೇಡ್‌
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next