Advertisement

ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ: ಅ.24ರಂದು ಭಾರತ-ಪಾಕ್ ಮುಖಾಮುಖಿ

02:39 PM Aug 17, 2021 | Team Udayavani |

ದುಬೈ: ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಕೂಟದ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಕದನ ಅ.24ರಂದು ದುಬೈನಲ್ಲಿ ನಡೆಯಲಿದೆ.

Advertisement

ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್‌-19 ಕಾರಣಗಳಿಂದಾಗಿ ಯುಎಇ ಮತ್ತು ಒಮಾನ್‌ಗೆ ಸ್ಥಳಾಂತರಿಸಲಾಗಿದೆ. ಬಿಸಿಸಿಐ ಆಯೋಜಕತ್ವದಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್‌ ಝಯೀದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್‌ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ 2021ರ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ನಮ್ಮ ಒಬ್ಬನನ್ನು ಕೆಣಕಿದರೆ ನಾವು 11 ಮಂದಿಯೂ ತಿರುಗಿ ಬೀಳುತ್ತೇವೆ: ಕೆ.ಎಲ್.ರಾಹುಲ್

ಅಕ್ಟೋಬರ್  17ರಿಂದ ವಿಶ್ವಕಪ್ ಆರಂಭವಾಗಲಿದ್ದು, 23ರವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್‌, ನೆದರ್ಲೆಂಡ್‌, ಸ್ಕಾಟ್‌ಲೆಂಡ್‌, ನಮೀಬಿಯಾ, ಒಮಾನ್‌, ಪಪುವಾ ನ್ಯೂ ಗ್ಯುನಿಯಾ ದೇಶಗಳು ಇದರಲ್ಲಿ ಆಡಲಿದೆ.

Advertisement

ಸೂಪರ್ 12ನ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಎರಡು ಅರ್ಹತೆ ಪಡೆದ ತಂಡಗಳು ಇರಲಿದೆ. ಇದರ ಮೊದಲ ಪಂದ್ಯ ಅ.23ರಂದು ನಡೆಯಲಿದೆ.

ಭಾರತ ತಂಡವು ಬಿ ಗುಂಪಿನಲ್ಲಿದ್ದು, ಪಾಕಿಸ್ಥಾನ, ಅಫ್ಘಾನಿಸ್ಥಾನ, ನ್ಯೂಜಿಲ್ಯಾಂಡ್ ಮತ್ತು ಎರಡು ಅರ್ಹತೆ ಪಡೆದ ತಂಡಗಳು ಆಡಲಿದೆ.

ಭಾರತ ಅ.24ರಂದು ಪಾಕ್ ವಿರುದ್ಧ, ಅ.31ರಂದು ನ್ಯೂಜಿಲ್ಯಾಂಡ್ ವಿರುದ್ದ, ನ.3ರಂದು ಅಫ್ಘಾನಿಸ್ಥಾನ ವಿರುದ್ದ, ನ.5ರಂದು ಅರ್ಹತೆ ಪಡೆದ ಮೊದಲ ತಂಡ ಮತ್ತು ನ.8ರಂದು ಅರ್ಹತೆ ಪಡೆದ ಎರಡನೇ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next