Advertisement
ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 9 ವಿಕೆಟಿಗೆ 106 ರನ್ ಮಾಡಿತು. ಗುರಿ ಬೆನ್ನಟ್ಟಿದ ಪಾಕ್ ತಿಣುಕಾಡಿತು. ನಾಯಕ ಬಾಬರ್ ಅಜಂ, ಕೊನೆಯ ಹಂತದಲ್ಲಿ ಅಫ್ರಿದಿ ದ್ವಯರು ಬ್ಯಾಟಿಂಗ್ ಮಾಡಿ ಗೆಲುವಿನ ದಡ ಸೇರಿಸಿದರು. ಬಾಬರ್ ಔಟಾಗದೆ 32 ರನ್ ಗಳಿಸಿದರು. ಇದರಿಂದಾಗಿ ಭಾರತದ ದಿಗ್ಗಜ ಬ್ಯಾಟ್ಸ್ ಮ್ಯಾನ್ , ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ತನ್ನದಾಗಿಸಿಕೊಂಡರು.ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತನ್ನದಾಗಿಸಿಕೊಂಡರು. ಬಾಬರ್ 17 ಇನ್ನಿಂಗ್ಸ್ ಗಳಲ್ಲಿ 549 ರನ್ ಗಳಿಸಿದ್ದಾರೆ. ಧೋನಿ 29 ಇನ್ನಿಂಗ್ಸ್ ಗಳಲ್ಲಿ 529 ರನ್ ಗಳಿಸಿದ್ದರು. ಕೇನ್ ವಿಲಿಯಮ್ಸನ್ 19 ಇನ್ನಿಂಗ್ಸ್ ಗಳಲ್ಲಿ 527, ಜಯವರ್ಧನೆ 11 ಇನ್ನಿಂಗ್ಸ್ ಗಳಲ್ಲಿ 360 , ಗ್ರೇಮ್ ಸ್ಮಿತ್ 16 ಇನ್ನಿಂಗ್ಸ್ ಗಳಲ್ಲಿ 352 ರನ್ ಗಳಿಸಿದ್ದಾರೆ.
Related Articles
Advertisement
ಪಾಕಿಸ್ಥಾನ ಪರ ಇಮಾದ್ ವಾಸಿಮ್ 8ಕ್ಕೆ 3, ಶಾಹೀನ್ ಅಫ್ರಿದಿ 22ಕ್ಕೆ 3, ಮೊಹಮ್ಮದ್ ಆಮಿರ್ 11ಕ್ಕೆ 2 ವಿಕೆಟ್ ಉರುಳಿಸಿದರು. ಎರಡೂ ತಂಡಗಳು ಈಗಾಗಲೇ ಕೂಟದಿಂದ ನಿರ್ಗಮಿಸಿವೆ.