Advertisement

ಮೇ 28ಕ್ಕೆ ಟಿ20 ವಿಶ್ವಕಪ್‌ ಭವಿಷ್ಯ ನಿರ್ಧಾರ ಸಾಧ್ಯತೆ

12:00 AM May 17, 2020 | Sriram |

ಹೊಸದಿಲ್ಲಿ: ಇದೇ ತಿಂಗಳು ಮೇ 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ವೀಡಿಯೊ ಕಾನ್ಫರೆನ್ಸ್‌ ನಡೆಸಲಿದ್ದು, ಆಸ್ಟ್ರೇಲಿಯದಲ್ಲಿ ನಡೆ ಯುವ ಟಿ20 ವಿಶ್ವಕಪ್‌ ಟೂರ್ನಿಯ ಬಗ್ಗೆ ಗಂಭೀರ ಚರ್ಚೆ ನಡೆಸಲಿದೆ.

Advertisement

ಕ್ರಿಕೆಟ್‌ ಜಾಗತಿಕ ಮಂಡಳಿಯಿಂದ ಎಎನ್‌ಐಗೆ ಲಭಿಸಿರುವ ಅಧಿಕೃತ ಮಾಹಿತಿ ಪ್ರಕಾರ ಇದೇ ತಿಂಗಳು ಐಸಿಸಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಟಿ20 ವಿಶ್ವಕಪ್‌ ಆಯೋಜನೆ ಕುರಿತು ಪ್ರಧಾನ ಚರ್ಚೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.ಮೇ 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಸಭೆ ನಡೆಯಲಿದೆ.

ಈ ಸಭೆಯ ಮುಖ್ಯ ಕಾರ್ಯಸೂಚಿಯು ಟಿ20 ವಿಶ್ವಕಪ್‌ ನಿಗದಿತ ದಿನಾಂಕದ ಪ್ರಕಾರ ನಡೆಸಲು ನಿರ್ಧರಿಸಿದ್ದಲ್ಲಿ ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಮತ್ತು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ವಿಚಾರ ಮಾತ್ರವಲ್ಲದೆ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವುದು ಸೇರಿದಂತೆ ಹಲವು ಪ್ರಸ್ತಾವಗಳನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚಿಸಲಾಗುವುದು ಎಂದು ಐಸಿಸಿ ಮೂಲಗಳು ಎಎನ್‌ಐಗೆ ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next