Advertisement

ಟಿ20 ವಿಶ್ವಕಪ್‌ ಆಯೋಜನೆ ಸಂಶಯ

01:31 AM Apr 28, 2020 | Sriram |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಗುರುವಾರ ವಿವಿಧ ದೇಶಗಳ ಮಂಡಳಿಗಳ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಆಸ್ಟ್ರೇಲಿಯದಲ್ಲಿ ಈ ವರ್ಷ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟ ಆಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಯುವ ಸಾಧ್ಯತೆಯಿದೆ.

Advertisement

ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯುವ ಈ ಬೃಹತ್‌ ಕೂಟ ಆಯೋಜಿಸುವುದು ಸಂಶಯವೆಂದು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಅಭಿಪ್ರಾಯಪಟ್ಟಿದೆ. ಕೋವಿಡ್ 19  ರೋಗ ನಿಯಂತ್ರಣಕ್ಕೆ ಬಂದು ಜನಜೀವನ ಸಹಜಸ್ಥಿತಿಗೆ ಮರಳಿದ ಬಳಕವೇ ಈ ಬಗ್ಗೆ ಆಲೋಚನೆ ಮಾಡುವುದು ಸೂಕ್ತವೆಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೃಹತ್‌ ಮಟ್ಟದಲ್ಲಿ ಕ್ರಿಕೆಟ್‌ ಕೂಟವೊಂದನ್ನು ಆಯೋಜಿಸುವ ಕುರಿತು ಆಲೋಚನೆ ಮಾಡುವುದು ತಪ್ಪು. ಈ ಹಂತದಲ್ಲಿ ಯಾವಾಗ ಅಂತಾರಾಷ್ಟ್ರೀಯ ಪ್ರಯಾಣ ಸುರಕ್ಷಿತ ಎಂಬುದು ತಿಳಿದಿಲ್ಲ. ಕೆಲವರು ಜೂನ್‌ ಮತ್ತೆ ಕೆಲವರು ಇನ್ನಷ್ಟು ದೀರ್ಘ‌ ಸಮಯ ಬೇಕಾಗಬಹುದೆಂದು ಹೇಳುತ್ತಾರೆ. ಒಮ್ಮೆ ಪ್ರಯಾಣ ಆರಂಭವಾದ ಬಳಿಕ ಕೋವಿಡ್ 19 ರೋಗ ನಿಯಂತ್ರಣದಲ್ಲಿ ಇರುವ ಕುರಿತು ಅಧ್ಯಯನ ನಡೆಸಬೇಕಾಗಿದೆ. ಆಬಳಿಕವಷ್ಟೇ ಇತರ ಚಟುವಟಿಕೆಗಳು ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಈ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಬೃಹತ್‌ ಕೂಟ ಆಯೋಜಿಸುವ ವೇಳೆ ಆಟಗಾರರ, ಮತ್ತು ಅಭಿಮಾನಿಗಳ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ಆತಿಥ್ಯ ರಾಷ್ಟ್ರದ ಸರಕಾರ ಎಲ್ಲ ವ್ಯವಸ್ಥೆ ಮಾಡಬೇಕಾಗಿದೆ ಇದರ ಜವಾಬ್ದಾರಿಯನ್ನು ಐಸಿಸಿ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯ ವಹಿಸಿಕೊಳ್ಳಬೇಕಾಗಿದೆ.

ನಿರಂತರ ಮಾತುಕತೆ
ಈ ಹಿಂದೆ ನಿರ್ಧರಿಸಿದಂತೆ ಟಿ20 ವಿಶ್ವಕಪ್‌ ಕೂಟವನ್ನು ಆಯೋಜಿಸುವ ನಿಟ್ಟಿನಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯವು ಐಸಿಸಿ, ಸ್ಥಳೀಯ ಸಂಘಟನಾ ಸಮಿತಿ ಮತ್ತು ಆಸ್ಟ್ರೇಲಿಯ ಸರಕಾರದ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದೆಯಲ್ಲದೇ ನಿರಂತರ ಮಾತುಕತೆ ನಡೆಸುತ್ತಿದೆ. ಕೂಟ ಆಯೋಜಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದೇವೆ. ಪ್ರತಿಯೊಬ್ಬರ ಭದ್ರತೆ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಮಯದಲ್ಲಿ ಅದ್ಭುತ ರೀತಿಯಲ್ಲಿ ಕೂಟ ಆಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯದ ಸಿಇಒ ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next