Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಗಳಿಸಿದ್ದು 7 ವಿಕೆಟಿಗೆ ಕೇವಲ 110 ರನ್. ಇದು ಪಾಕಿಸ್ಥಾನದೆದುರಿನ ಬ್ಯಾಟಿಂಗಿ ಗಿಂತಲೂ ಕಳಪೆ ಆಟವಾಗಿತ್ತು. ಜವಾಬಿತ್ತ ನ್ಯೂಜಿಲ್ಯಾಂಡ್ 14.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 111 ರನ್ ಬಾರಿಸಿ ಖಾತೆ ತೆರೆಯಿತು; ನಾಕೌಟ್ ರೇಸ್‌ನಲ್ಲಿ ಉಳಿಯಿತು.ಆರಂಭಕಾರ ಡ್ಯಾರಿಲ್ ಮಿಚೆಲ್ 49, ನಾಯಕ ಕೇನ್ ವಿಲಿಯಮ್ಸನ್ ಅಜೇಯ 33 ರನ್ ಬಾರಿಸಿ ಕಿವೀಸ್‌ಗೆ ಸುಲಭ ಜಯ ತಂದಿತ್ತರು.
ಅಜೇಯ 26 ರನ್ ಮಾಡಿದ ರವೀಂದ್ರ ಜಡೇಜ ಅವರದೇ ಭಾರತದ ಸರದಿಯ ಅತ್ಯಧಿಕ ಗಳಿಕೆ. ಕೊನೆಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಅವರು 19 ಎಸೆತ ಎದುರಿಸಿ 2 ಬೌಂಡರಿ, ಒಂದು ಸಿಕ್ಸರ್ ಹೊಡೆದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. ಓಪನಿಂಗ್ ಬದಲಾವಣೆ
ಭಾರತದ ಓಪನಿಂಗ್‌ನಲ್ಲಿ ಮಹತ್ವದ ಬದಲಾವಣೆ ಯೊಂದು ಸಂಭವಿಸಿತು. ರೋಹಿತ್ ಶರ್ಮ ಬದಲು ಇಶಾನ್ ಕಿಶನ್ ಆಡಲಿಳಿದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ಬೌಲ್ಟ್ ತಮ್ಮ ದ್ವಿತೀಯ ಓವರ್‌ನಲ್ಲಿ ಈ ವಿಕೆಟ್ ಹಾರಿಸಿದರು. ಇಶಾನ್ ಗಳಿಕೆ ಕೇವಲ 4 ರನ್.
Related Articles
Advertisement
ಇನ್ನೇನು ಪವರ್ ಪ್ಲೇ ಮುಗಿಯಿತು ಎನ್ನುವ ಹಂತದಲ್ಲಿ ಟಿಮ್ ಸೌಥಿ ದೊಡ್ಡ ಬೇಟೆಯಾಡಿದರು. ಮುನ್ನುಗ್ಗುವ ಸೂಚನೆ ನೀಡಿದ ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಸಿಕ್ಸರ್ ಬಾರಿಸಲು ಮುಂದಾಗಿದ್ದ ರಾಹುಲ್ ಬೌಂಡರಿ ಲೈನ್‌ನಲ್ಲಿದ್ದ ಮಿಚೆಲ್ ಕೈಗೆ ಕ್ಯಾಚ್ ಹೋಗುವುದನ್ನು ನೋಡಬೇಕಾಯಿತು. ರಾಹುಲ್ ಗಳಿಕೆ 3 ಬೌಂಡರಿಗಳನ್ನೊಳಗೊಂಡ 18 ರನ್. ಪವರ್ ಪ್ಲೇಯಲ್ಲಿ ಭಾರತದ ಸ್ಕೋರ್ ಎರಡಕ್ಕೆ ಕೇವಲ 35 ರನ್ ಆಗಿತ್ತು.
ಇದನ್ನೂ ಓದಿ:ಟಿ20 ವಿಶ್ವಕಪ್: ಅಫ್ಘಾನಿಸ್ಥಾನಗೆ ಗೆಲುವಿನ ವಿದಾಯ
ರೋಹಿತ್ ಶರ್ಮ 2013ರ ಬಳಿಕ ಓಪನಿಂಗ್ ಕ್ರಮಾಂಕದಿಂದ ಕೆಳಗಿಳಿದದ್ದು ಇದು 3ನೇ ಸಲ. ಹಿಂದಿನೆರಡು ಸಲ ಅವರ ಗಳಿಕೆ ಸೊನ್ನೆ ಮತ್ತು 60 ರನ್. ಇಲ್ಲಿ ಜೀವದಾನದ ಲಾಭವನ್ನೆತ್ತಲಾಗಲಿಲ್ಲ. ಲೈಫ್ ನೀಡಿದ ಮಿಲೆ° ಓವರ್‌ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರೂ ಎಸೆತಕ್ಕೊಂದರಂತೆ 14 ರನ್ ಮಾಡಿ “ಬರ್ತ್‌ಡೇ ಬಾಯ್’ ಐಶ್ ಸೋಧಿಯ ಮೊದಲ ಓವರ್‌ನಲ್ಲೇ ಗಪ್ಟಿಲ್‌ಗೆ ಕ್ಯಾಚ್ ನೀಡಿ ವಾಪಸಾದರು. ಸೋಧಿ ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಉರುಳಿಸಿದ ದಾಖಲೆಯನ್ನು 18ಕ್ಕೆ ವಿಸ್ತರಿಸಿದರು.
10 ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟಿಗೆ ಕೇವಲ 48 ರನ್ ಮಾಡಿತ್ತು. ವಿರಾಟ್ ಕೊಹ್ಲಿ ಕೂಡ ನೆರವಿಗೆ ನಿಲ್ಲಲಿಲ್ಲ. 17 ಎಸೆತಗಳಿಂದ ಬರೀ 9 ರನ್ ಮಾಡಿ ಸೋಧಿ ಮೋಡಿಗೆ ಸಿಲುಕಿದರು. ಕವರ್ ಡ್ರೈವ್ ಮಾಡುವ ಕೊಹ್ಲಿ ಪ್ರಯತ್ನ ಫಲಿಸಲಿಲ್ಲ. ಟಾಪ್ ಎಜ್ ಆದ ಚೆಂಡು ಅತೀ ಎತ್ತರಕ್ಕೆ ನೆಗೆಯಿತು. ಅಲ್ಲಿ ಬೌಲ್ಟ್ ಹೊಂಚುಹಾಕಿ ಕುಳಿತ್ತಿದ್ದರು. 48ಕ್ಕೆ 4 ವಿಕೆಟ್ ಬಿತ್ತು.
ಸ್ಕೋರ್ 75ಕ್ಕೆ ಏರಿದಾಗ ಪಂತ್ ಕೂಡ ಆಟ ಮುಗಿಸಿ ದರು (19 ಎಸೆತ, 12 ರನ್). ಕೊಹ್ಲಿ ಮತ್ತು ಪಂತ್ ಒಟ್ಟು 36 ಎಸೆತ ಎದುರಿಸಿದರೂ ಒಂದೂ ಬೌಂಡರಿ ಬಾರಿಸಲಿಲ್ಲ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಹಾರ್ದಿಕ್ ಪಾಂಡ್ಯ ಸಿಡಿದು ನಿಲ್ಲಲಿಲ್ಲ.
ಭಾರತದ ಬ್ಯಾಟಿಂಗ್ ಎಷ್ಟೊಂದು ನೀರಸವಾಗಿ ತ್ತೆಂದರೆ, 5.1 ಓವರ್ ಬಳಿಕ ಮತ್ತೂಂದು ಬೌಂಡರಿ ಕಾಣಲು 17ನೇ ಓವರ್ ತನಕ ಕಾಯಬೇಕಾಯಿತು!
ಇಶಾನ್, ಠಾಕೂರ್ ಸೇರ್ಪಡೆನ್ಯೂಜಿಲ್ಯಾಂಡ್ ಎದುರಿನ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಯಿತು. ಸೂರ್ಯಕುಮಾರ್ ಯಾದವ್ ಬದಲು ಇಶಾನ್ ಕಿಶನ್ ಅವಕಾಶ ಪಡೆದರೆ, ಫಾರ್ಮ್ನಲ್ಲಿಲ್ಲದ ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಬಂದರು. ಸೂರ್ಯಕುಮಾರ್‌ಗೆ ಬೆನ್ನುನೋವು ಎಂಬುದಾಗಿ ಕೊಹ್ಲಿ ಹೇಳಿದರು. ಸ್ಕೋರ್ ಪಟ್ಟಿ
ಭಾರತ
ಕೆ. ಎಲ್ ರಾಹುಲ್ ಸಿ ಮಿಚೆಲ್ ಬಿ ಸೌಥಿ 18
ಇಶಾನ್ ಕಿಶನ್ ಸಿ ಮಿಚೆಲ್ ಬಿ ಬೌಲ್ಟ್ 4
ರೋಹಿತ್ ಶರ್ಮ ಸಿ ಗಪ್ಟಿಲ್ ಬಿ ಸೋಧಿ 14
ವಿರಾಟ್ ಕೊಹ್ಲಿ ಸಿ ಬೌಲ್ಟ್ ಬಿ ಸೋಧಿ 9
ರಿಷಭ್ ಪಂತ್ ಬಿ ಮಿಲೆ° 12
ಹಾರ್ದಿಕ್ ಪಾಂಡ್ಯ ಸಿ ಗಪ್ಟಿಲ್ ಬಿ ಬೌಲ್ಟ್ 23
ರವೀಂದ್ರ ಜಡೇಜ ಔಟಾಗದೆ 26
ಶಾರ್ದೂಲ್ ಠಾಕೂರ್ ಸಿ ಗಪ್ಟಿಲ್ ಬಿ ಬೌಲ್ಟ್ 0
ಮೊಹಮ್ಮದ್ ಶಮಿ ಔಟಾಗದೆ 0
ಇತರ 4
ಒಟ್ಟು (7 ವಿಕೆಟಿಗೆ) 110
ವಿಕೆಟ್ ಪತನ:1-11, 2-35, 3-40, 4-48, 5-70, 6-94, 7-94.
ಬೌಲಿಂಗ್;
ಟ್ರೆಂಟ್ ಬೌಲ್ಟ್ 4-0-20-3
ಟಿಮ್ ಸೌಥಿ 4-0-26-1
ಮಿಚೆಲ್ ಸ್ಯಾಂಟ್ನರ್ 4-0-15-0
ಆ್ಯಡಂ ಮಿಲೆ° 4-0-30-1
ಐಶ್ ಸೋಧಿ 4-0-17-2
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಠಾಕೂರ್ ಬಿ ಬುಮ್ರಾ 20
ಡೇರಿಯಲ್ ಮಿಚೆಲ್ ಸಿ ರಾಹುಲ್ ಬಿ ಬುಮ್ರಾ 49
ವಿಲಿಯಮ್ಸನ್ ಔಟಾಗದೆ 33
ಡೇವನ್ ಕಾನ್ವೆ ಔಟಾಗದೆ 2
ಇತರ 7
ಒಟ್ಟು (14.3 ಓವರ್‌ಗಳಲ್ಲಿ 2 ವಿಕೆಟಿಗೆ) 111
ವಿಕೆಟ್ ಪತನ:1-24, 2-96.
ಬೌಲಿಂಗ್;
ವರುಣ್ ಚಕ್ರವರ್ತಿ 4-0-23-0
ಜಸ್‌ಪ್ರೀತ್ ಬುಮ್ರಾ 4-0-19-2
ರವೀಂದ್ರ ಜಡೇಜ 2-0-23-0
ಮೊಹಮ್ಮದ್ ಶಮಿ 1-0-11-0
ಶಾರ್ದೂಲ್ ಠಾಕೂರ್ 1.3-17-0
ಹಾರ್ದಿಕ್ ಪಾಂಡ್ಯ 2-0-17-0
ಪಂದ್ಯಶ್ರೇಷ್ಠ: ಐಶ್ ಸೋಧಿ